ಹುಣಸೂರು: ಬೈಕಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಆರೋಪಿಯನ್ನು ಮಾಲು ಸಹಿತ ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿದ ಘಟನೆ ಗುರುವಾರ ಸಂಜೆ ಹುಣಸೂರಿನಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ರತ್ನಪುರಿ ನಿವಾಸಿ ಮಹಮದ್ ಮುಬಾರಕ್ ಎಂಬಾತನನ್ನು ಗಾಂಜಾ ಸಾಗಾಟ ಆರೋಪದಲ್ಲಿ ಬಂಧಿಸಲಾಗಿದೆ.
ರತ್ನಪುರಿಯಿಂದ ಗದ್ದಿಗೆ ಗ್ರಾಮದ ಕಡೆಗೆ ಬೈಕಿನಲ್ಲಿ ಸುಮಾರು 410 ಗ್ರಾಂ ಹದ ಮಾಡಿದ್ದ ಗಾಂಜಾ ಪ್ಯಾಕೆಟ್ ಸಾಗಿಸುವಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ಮನೆ ಅಂಗಳವೇ ಪ್ಯಾಲೇಸು; ಸರಳ ಹಬ್ಬವೇ ಲೇಸು: ಡಾ.ಸಿ.ಎನ್.ಮಂಜುನಾಥ್
ಅಬಕಾರಿ ಡಿವೈ ಎಸ್ ಪಿ ಶ್ರೀನಿವಾಸ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕರಾದ ನಟರಾಜ್ ನೇತೃತ್ವದ ತಂಡ ದಾಳಿ ನಡೆಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಅಬಕಾರಿ ಇಲಾಖೆ ಉಪ ಆಯುಕ್ತೆ ಮಾಹಿತಿ ನೀಡಿದ್ದಾರೆ.