Advertisement

ಪಾದಚಾರಿಗಳನ್ನು ದೋಚುತ್ತಿದ್ದ ಖದೀಮರಿಬ್ಬರ ಬಂಧನ

12:01 PM Jun 23, 2022 | Team Udayavani |

ಹುಬ್ಬಳ್ಳಿ: ದಾರಿಯಲ್ಲಿ ಹೋಗುತ್ತಿದ್ದವರನ್ನು ತಡೆದು ಹಣ, ಬೆಳೆಬಾಳುವ ವಸ್ತು ಕಿತ್ತುಕೊಂಡು ಹೋಗುತ್ತಿದ್ದ ಇಬ್ಬರು ಜಬರಿ ಕಳ್ಳರನ್ನು ಉಪನಗರ ಪೊಲೀಸರು ಬಂಧಿಸಿ ಅವರಿಂದ 11ಸಾವಿರ ರೂ. ನಗದು, ಒಂದು ಆಟೋರಿಕ್ಷಾ, ಒಂದು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

Advertisement

ಬಂಧಿತರು ಮಂಗಳವಾರ ನಡೆದುಕೊಂಡು ಹೋಗುತ್ತಿದ್ದ ಓರ್ವರನ್ನು ತಡೆದು 10 ಸಾವಿರ ರೂ. ಕಿತ್ತುಕೊಂಡು ಹೋಗಿದ್ದರು. ಈ ಕುರಿತು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳ್ಳರ ಜಾಡು ಬೆನ್ನು ಹತ್ತಿದ ಠಾಣೆಯ ಇನ್ಸ್‌ಪೆಕ್ಟರ್‌ ರವಿಚಂದ್ರ ಬಡೆಫಕ್ಕಿರಪ್ಪನವರ, ಪಿಎಸ್‌ಐ ಯು. ಎಂ. ಪಾಟೀಲ ಮತ್ತು ಸಿಬ್ಬಂದಿ ಮಾಹಿತಿ ಕಲೆ ಹಾಕಿ 24 ತಾಸಿನೊಳಗೆ ಇಬ್ಬರನ್ನು ಆಟೋರಿಕ್ಷಾ ಸಮೇತ ಬಂಧಿಸಿ, 9.500ರೂ. ನಗದು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆ ವೇಳೆ ಬಂಧಿತರಿಬ್ಬರು ವಿದ್ಯಾನಗರ ಹಾಗೂ ಶಹರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಒಂದೊಂದು ಜಬರಿ ಕಳ್ಳತನ ಮಾಡಿದ್ದ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಆಗ ಅವರಿಂದ 1,500ರೂ. ನಗದು, ಕೃತ್ಯಕ್ಕೆ ಬಳಸಿದ್ದ ಡಿಯೋ ಸ್ಕೂಟಿ ವಶಪಡಿಕೊಂಡು, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಪೊಲೀಸ್‌ ಆಯುಕ್ತರು ಸಿಬ್ಬಂದಿ ಕಾರ್ಯವೈಖರಿ ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.

ಮೂವರು ಮನೆಗಳ್ಳರ ಬಂಧನ-21ಗ್ರಾಂ ಚಿನ್ನಾಭರಣ ವಶ: ಕೇಶ್ವಾಪುರ ಠಾಣೆ ವ್ಯಾಪ್ತಿಯಲ್ಲಿ ಹಗಲು ಹೊತ್ತಿನಲ್ಲೇ ಮನೆಯ ಕೀಲಿ ಮುರಿದು ಕಳ್ಳತನ ಮಾಡಿದ್ದ ಮೂವರನ್ನು ಕೇಶ್ವಾಪುರ ಪೊಲೀಸರು ಬಂಧಿಸಿ ಅವರಿಂದ 21ಗ್ರಾಂ ಚಿನ್ನಾಭರಣ, 10ಗ್ರಾಂ ಬೆಳ್ಳಿ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ.

ಕೇಶ್ವಾಪುರ ಠಾಣೆ ವ್ಯಾಪ್ತಿಯಲ್ಲಿ ಹಗಲು ವೇಳೆ ಮನೆ ಕಳ್ಳತನ ನಡೆದಿತ್ತು. ಪ್ರಕರಣದ ತನಿಖೆ ನಡೆಸಿದ ಠಾಣೆ ಇನ್ಸ್‌ಪೆಕ್ಟರ್‌ ಜಗದೀಶ ಹಂಚಿನಾಳ ಹಾಗೂ ಸಿಬ್ಬಂದಿ ತಂಡವು ಮೂವರನ್ನು ಬಂಧಿಸಿ, ಕಳ್ಳತನ ಮಾಡಿದ್ದ ಚಿನ್ನ ಮತ್ತು ಬೆಳ್ಳಿ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next