Advertisement

ಕ್ರಿಕೆಟ್‌ ಬೆಟ್ಟಿಂಗ್‌ ಆರೋಪಿ ಬಂಧನ

12:23 PM Mar 31, 2019 | Lakshmi GovindaRaju |

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್‌ ನಡುವೆ ಮಾ.28ರಂದು ನಡೆದ ಐಪಿಎಲ್‌ ಟಿ-20 ಕ್ರಿಕೆಟ್‌ ಪಂದ್ಯದ ವೇಳೆ ಮೊಬೈಲ್‌ ಆ್ಯಪ್‌ ಮೂಲಕ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Advertisement

ಲೊಟ್ಟೆಗೊಲ್ಲಹಳ್ಳಿ ನಿವಾಸಿ ಶೇಖ್‌ ಶಫಿ (32) ಬಂಧಿತ. ಆರೋಪಿಯಿಂದ ಬೆಟ್ಟಿಂಗ್‌ಗೆ ಹೂಡಿಕೆ ಮಾಡಿದ್ದ 2.5 ಲಕ್ಷ ರೂ. ನಗದು, 18 ಮೊಬೈಲ್‌ಗ‌ಳು, ಬೆಟ್ಟಿಂಗ್‌ ವಿವರ ದಾಖಲಿಸಿಕೊಂಡಿದ್ದ 93 ಚೀಟಿ ವಶಪಡಿಸಿಕೊಳ್ಳಲಾಗಿದೆ.

ಕೊಡಿಗೆಹಳ್ಳಿ ಠಾಣೆ ವ್ಯಾಪ್ತಿಯ ಲೊಟ್ಟೆಗೊಲ್ಲಹಳ್ಳಿಯ 16ನೇ ಕ್ರಾಸ್‌ನ ಜಲಗೇರಮ್ಮ ದೇವಾಲಯ ಸಮೀಪದ ಮನೆಯಲ್ಲಿದ್ದ ಆರೋಪಿ, ಪ್ರಮುಖ ಬುಕ್ಕಿಗಳ ಸೂಚನೆ ಮೇರೆಗೆ ದಂಧೆ ನಡೆಸುತ್ತಿದ್ದ.

ಮೊಬೈಲ್‌ ಆ್ಯಪ್‌ ಒಂದರ ಮೂಲಕ ಹಣ ಕಟ್ಟಿಸಿಕೊಂಡು ಬೆಟ್ಟಿಂಗ್‌ ಆಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ತಲೆಮರೆಸಿಕೊಂಡಿರುವ ಪ್ರಮುಖ ಬುಕ್ಕಿ ಮುಖೇಶ್‌ಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next