Advertisement

11 ವರ್ಷದ ಬಳಿಕ ಅಪರಾಧಿ ಸೆರೆ

11:46 AM Feb 23, 2022 | Team Udayavani |

ಬೆಂಗಳೂರು: ಅತೀ ವೇಗ ಮತ್ತು ಅಜಾಗರೂಕತೆಯಿಂದ ಮರಳು ತುಂಬಿದ ಲಾರಿ ಚಲಾಯಿಸಿಕೊಂಡು ಪಾದಚಾರಿಯೊಬ್ಬರ ಸಾವಿಗೆ ಕಾರಣವಾಗಿ, ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿ ಯೊಬ್ಬನನ್ನು 11 ವರ್ಷದ ಬಳಿಕ ವಿಜಯನಗರ ಸಂಚಾರ ಪೊಲೀಸರು ಬಂಧಿಸಿದ್ದಾರೆ.

Advertisement

ಮಾಗಡಿ ರಸ್ತೆಯ ಅಂಜನಾ ನಗರದ ಗೋಪಾಲಕೃಷ್ಣ (60) ಬಂಧಿತ. 2011ರ ಮೇ 17ರಂದು ಅಪರಾಧಿ ಮನೀಶಾ(30)ಎಂಬವರ ಮೇಲೆ ಲಾರಿ ಹತ್ತಿಸಿದ ಪರಿಣಾಮಅವರು ಮೃತಪಟ್ಟಿದ್ದರು. ಬಿಎಂಟಿಸಿಯಲ್ಲಿ 1981ರಿಂದ 2001ರವರೆಗೆ ಚಾಲಕನಾಗಿದ್ದ ಗೋಪಾಲಕೃಷ್ಣ, ಕರ್ತವ್ಯಕ್ಕೆ ಗೈರಾಗುತ್ತಿದ್ದರಿಂದ ಕೆಲಸದಿಂದ ವಜಾಗೊಳಿಸಲಾಗಿತ್ತು. ನಂತರ ಮರಳು ಲಾರಿಯ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಮೇ 17ರಂದು ಮಂಜುನಾಥನಗರ ನಿವಾಸಿ ಮನೀಶಾ ಅವರು ವಿಜಯನಗರದ ವೆಸ್ಟ್‌ ಆಫ್ ಕಾರ್ಡ್‌ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು.

ಈ ವೇಳೆ ಅತೀವೇಗ ಮತ್ತು ಅಜಾಗರೂಕತೆಯಿಂದ ಬಂದ ಗೋಪಾಲಕೃಷ್ಣ ಅವರ ಮೇಲೆ ಲಾರಿ ಹತ್ತಿಸಿದ್ದ. ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಸಂಬಂಧ ಸಂಚಾರ ಪೊಲೀಸರು ಆರೋಪಿಯನ್ನು ಬಂಧಿಸಿ ಕೋರ್ಟ್‌ಗೆ ಹಾಜರು ಪಡಿಸಿದ್ದರು. ವಿಚಾರಣೆ ಬಳಿಕ ಆರೋಪಿಗೆ ಕೋರ್ಟ್‌ ಜೈಲು ಶಿಕ್ಷೆ ವಿಧಿಸಿತ್ತು. ಆದರೆ, ವಿಚಾರ ತಿಳಿಯುತ್ತಿದ್ದಂತೆ ತಲೆಮರೆಸಿಕೊಂಡಿದ್ದ. ಇತ್ತೀಚೆಗೆ ಶಿಕ್ಷೆಗೆ ಗುರಿಯಾಗಿ ಬಾಕಿ ಉಳಿದಿರುವ ವಾರೆಂಟ್‌ಗಳನ್ನು ಪರಿಶೀಲಿಸಿದಾಗ ಗೋಪಾಲಕೃಷ್ಣನ ಅಪಘಾತ ಪ್ರಕರಣಪತ್ತೆಯಾಗಿತ್ತು. ಈ ವೇಳೆ, ಕಾರ್ಯಾಚರಣೆನಡೆಸಿದ ವಿಜಯನಗರ ಠಾಣೆ ಹೆಡ್‌ ಕಾನ್ಸ್‌ಟೆಬಲ್‌ ಮಂಜುನಾಥ್‌ ಆರೋಪಿಯನ್ನು ಪತ್ತೆ ಹಚ್ಚಿ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next