Advertisement

Arrested: ತಂಬಾಕು ಉತ್ಪನ್ನ ಸಹಿತ ಬಂಧನ

08:23 PM Apr 18, 2024 | Team Udayavani |

ಕುಂಬಳೆ: ಕರ್ನಾಟಕದಿಂದ ಕಾಸರಗೋಡಿಗೆ ಕಾರಿನಲ್ಲಿ ಸಾಗಿಸುತ್ತಿದ್ದ 31488 ಪ್ಯಾಕೆಟ್‌ ಪಾನ್‌ ಮಸಾಲೆ ಉತ್ಪನ್ನವನ್ನು ಕುಂಬಳೆ ಜಿಎಚ್‌ಎಸ್‌ಎಸ್‌ ರಸ್ತೆಯಿಂದ ಕುಂಬಳೆ ಪೊಲೀಸರು ವಶಪಡಿಸಿದ್ದಾರೆ.

Advertisement

ಕಾರಿನಲ್ಲಿದ್ದ 30 ಸಾವಿರ ರೂ. ನಗದು ವಶಪಡಿಸಿದ್ದಾರೆ. ಕಾರಿನೊಳಗೆ 18 ಗೋಣಿ ಚೀಲಗಳಲ್ಲಿ ತಂಬಾಕು ಉತ್ಪನ್ನಗಳನ್ನು ತುಂಬಿಸಲಾಗಿತ್ತು. ಈ ಸಂಬಂಧ ಕಾರಿನಲ್ಲಿದ್ದ ಕಾಸರಗೋಡು ಮುಟ್ಟತ್ತೋಡಿ ಹಿದಾಯತ್‌ ನಗರ ನಿವಾಸಿ ಅಬೂಬಕರ್‌ ಸಿದ್ದಿಕ್‌(33)ನನ್ನು ಬಂಧಿಸಿದ್ದಾರೆ. ವಾಹನ ತಪಾಸಣೆ ಸಂದರ್ಭದಲ್ಲಿ ಈ ರಸ್ತೆಯಲ್ಲಿ ಬಂದ ಟೊಯೊಟಾ ಕಾರಿನಿಂದ ತಂಬಾಕು ಉತ್ಪನ್ನ ಪತ್ತೆಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next