Advertisement

Arrested: ಕಳವು ಮಾಡಿದ್ದ 50 ದ್ವಿಚಕ್ರ ವಾಹನ,ಆಟೋ, ಎಂಟು ಮೊಬೈಲ್‌ ಜಪ್ತಿ: ಐವರ ಸೆರೆ‌

12:30 PM Jan 24, 2024 | Team Udayavani |

ಬೆಂಗಳೂರು: ವೈಟ್‌ಫೀಲ್ಡ್‌ ವಿಭಾಗದ ಮಾರತ್ತಹಳ್ಳಿ, ವರ್ತೂರು ಮತ್ತು ವೈಟ್‌ಫೀಲ್ಡ್‌ ಠಾಣಾ ಪೊಲೀಸರು ಪ್ರತ್ಯೇಕ ಪ್ರಕರಣದಲ್ಲಿ ಐವರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿ, 55 ಲಕ್ಷ ರೂ.

Advertisement

ಮೌಲ್ಯದ ವಿವಿಧ ಕಂಪೆನಿಯ 50 ದ್ವಿಚಕ್ರ ವಾಹನಗಳು, 1 ಆಟೋ, 8 ಮೊಬೈಲ್‌ ಜಪ್ತಿ ಮಾಡಿದ್ದಾರೆ. ಮಾರತ್ತಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳ ಕಳವು ಮಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ಅವರಿಂದ 22 ಲಕ್ಷ ರೂ.ನ 12 ದ್ವಿಚಕ್ರ ವಾಹನ, ಆಟೋ ವಶಪಡಿಸಿಕೊಂಡಿದ್ದಾರೆ. ವೈಟ್‌ಫೀಲ್ಡ್‌ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳ್ಳನೊಬ್ಬನನ್ನು ವಶಕ್ಕೆ ಪಡೆದು ಆತನಿಂದ 18 ಲಕ್ಷ ರೂ. ಮೌಲ್ಯದ 15 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ. ಇನ್ನು ವರ್ತೂರು ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ದ್ವಿಚಕ್ರ ವಾಹನ ಕಳ್ಳರನ್ನು ವಶಕ್ಕೆ ಪಡೆದ ಪೊಲೀಸರು, 15 ಲಕ್ಷ ಮೌಲ್ಯದ 24 ದ್ವಿಚಕ್ರ ವಾಹನ ಜಪ್ತಿ ಮಾಡಿ ದ್ದಾರೆ. ಬಂಧಿತ ಆರೋಪಿಗಳು ಮನೆ ಮುಂದೆ ನಿಲುಗಡೆ ಮಾಡು ತ್ತಿದ್ದ ದ್ವಿಚಕ್ರ ವಾಹನಗಳ ಹ್ಯಾಂಡ್‌ಲಾಕ್‌ ಮುರಿದು ಕದಿಯುತ್ತಿದ್ದರು. ಕದ್ದ ಬೈಕ್‌ಗಳನ್ನು ಮಾರಾಟ ಮಾಡಿ ಬಂದ ದುಡ್ಡಿನಲ್ಲಿ ಮೋಜು-ಮಸ್ತಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next