Advertisement

Arrested: ಜಲಮಂಡಳಿಯ ಸೆಂಟ್ರಿಂಗ್‌ ಸಾಮಗ್ರಿ ಕಳವು ಮಾಡುತ್ತಿದ್ದ ಇಬ್ಬರ ಬಂಧನ 

01:23 PM Sep 30, 2024 | Team Udayavani |

ಬೆಂಗಳೂರು: ಜಲಮಂಡಳಿಗೆ ಸೇರಿದ ಸ್ಥಳದಲ್ಲಿ ಕಟ್ಟಡ ಕಾಮಗಾರಿಗೆ ಬಳಸುವ ಸೆಂಟ್ರಿಂಗ್‌ ಸಾಮಗ್ರಿಗಳನ್ನು ಕಳವು ಮಾಡಿದ್ದ ಇಬ್ಬರನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಸರ್ಜಾಪುರ ಮುಖ್ಯ ರಸ್ತೆಯ ಸೋಂಪುರ ಗೇಟ್‌ ನಿವಾಸಿ ರಂಜಿತ್‌ ತಾತಿ(26) ಮತ್ತು ಕಳವು ಮಾಲು ಸ್ವೀಕರಿಸಿದ್ದ ವಿಜಯನಗರ ಆರ್‌ಪಿಸಿ ಲೇಔಟ್‌ ನಿವಾಸಿ

ಸೈಯದ್‌ ಸಾಹಿಲ್‌(42) ಬಂಧಿತರು.  ಆರೋಪಿಗಳಿಂದ ಸುಮಾರು 5 ಲಕ್ಷ ರೂ. ಮೌಲ್ಯದ ಸೆಂಟ್ರಿಂಗ್‌ ಸಾಮಾಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಪೈಕಿ ರಂಜಿತ್‌ ತಾತಿ

ಸೆಕ್ಯೂರಿಟಿ ಫೀಲ್ಡ್‌ ಆಫೀಸರ್‌ ಆಗಿದ್ದು, ಸೈಯದ್‌ ಸಾಹಿಲ್‌ ಗುಜರಿ ವ್ಯಾಪಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

ಹೆಮ್ಮಿಗೇಪುರ ಮುಖ್ಯರಸ್ತೆಯಲ್ಲಿ ಬೆಂಗಳೂರು ಜಲಮಂಡಳಿಗೆ ಸೇರಿದ ಜಾಗದಲ್ಲಿ 13 ಎಂಎಲ್‌ಡಿ ಸಾಮರ್ಥ್ಯ ಎಸ್‌ಟಿಪಿ ನಿರ್ಮಿಸಲು ಖಾಸಗಿ ಕಂಪನಿಯೊಂದು ಗುತ್ತಿಗೆ ಪಡೆದು ಕಾಮಗಾರಿ ನಡೆಸುತ್ತಿದೆ. ಸೆ.6ರಿಂದ 8ರ ನಡುವೆ ದುಷ್ಕರ್ಮಿಗಳು ಈ ಕಾಮಗಾರಿ ಸ್ಥಳದಲ್ಲಿ 200 ಕಬ್ಬಿಣದ ಶೀಟ್‌ಗಳು, ಸ್ಲ್ಯಾಬ್‌ಗಳು ಸೇರಿ ಇತರೆ ಸೆಂಟ್ರಿಂಗ್‌ ಸಾಮಾಗ್ರಿಗಳನ್ನು ಕಳವು ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

ಸಿಸಿ ಕ್ಯಾಮೆರಾ ಸುಳಿವು ಆಧರಿಸಿ ಬಂಧನ: ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ವೇಳೆ ಸಿಕ್ಕ ಸುಳಿವು ಆಧರಿಸಿ ಆರೋಪಿ ರಂಜಿತ್‌ ನನ್ನು ವಶಕ್ಕೆ ಪಡೆದಿದ್ದಾರೆ.

ವಿಚಾರಣೆ ವೇಳೆ ಆರೋಪಿಯು ಸೆಂಟ್ರಿಂಗ್‌ ಸಾಮಾಗ್ರಿ ಕಳವು ಮಾಡಿದ್ದು ತಾನೇ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಈತ ನೀಡಿದ ಮಾಹಿತಿ ಮೇರೆಗೆ ಕಳವು ಮಾಲು ಸ್ವೀಕರಿಸಿದ್ದ ಆರೋಪಿ ಸೈಯದ್‌ ಸಾಹಿಲ್‌ನನ್ನು ಬಂಧಿಸಿದ್ದಾರೆ.

ಅಸ್ಸಾಂ ಮೂಲದ ಆರೋಪಿ ರಂಜಿತ್‌ ಸೆಕ್ಯೂರಿಟಿ ಫೀಲ್ಡ್ ಆಫೀಸ್‌ ಆಗಿದ್ದು, ಕುಟುಂಬದ ಜತೆ ಸರ್ಜಾಪುರ ಮುಖ್ಯರಸ್ತೆಯ ಸೋಂಪುರ ಗೇಟ್‌ ಬಳಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾನೆ. ಆರೋಪಿ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಕಾಮಗಾರಿ ಸ್ಥಳದಿಂದ ಸೆಟ್ರಿಂಗ್‌ ಸಾಮಾಗ್ರಿಗಳನ್ನು ಕಳವು ಮಾಡಿದ್ದ. ಕದ್ದ ಮಾಲುಗಳನ್ನು ಗುಜರಿ ವ್ಯಾಪಾರಿ ಸೈಯದ್‌ ಸಾಹಿಲ್‌ಗೆ ಮಾರಾಟ ಮಾಡಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next