Advertisement

Arrested: ಜನರನ್ನು ಅಡ್ಡಗಟ್ಟಿ ಮೊಬೈಲ್‌ ಕಸಿಯುತ್ತಿದ್ದ ಇಬ್ಬರ ಬಂಧನ

11:17 AM Jun 01, 2024 | Team Udayavani |

ಬೆಂಗಳೂರು: ಒಂಟಿಯಾಗಿ ಓಡಾಡುವ ಸಾರ್ವ ಜನಿಕರನ್ನು ಅಡ್ಡಗಟ್ಟಿ ಮೊಬೈಲ್‌ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ರಾಮಮೂರ್ತಿನಗರದ ಮೌಲಾಲಿ ಅಲಿಯಾಸ್‌ ಮೊಹಮದ್‌ ಅಲಿ(19) ಮತ್ತು ಮುತ್ತಮ್ಮ ಲೇಔಟ್‌ ನಿವಾಸಿ ಮೊಹಮದ್‌ ಜುನೈದ್‌(19) ಬಂಧಿತರು.

ಅರೋಪಿಗಳಿಂದ 1 ಮೊಬೈಲ್‌ ಮತ್ತು ಕೃತ್ಯಕ್ಕೆ ಬಳಸಿದ್ದ 1 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು. ಕಳೆದ ಫೆ.5ರ ರಾತ್ರಿ ಸುಮಾರು 9.30ಕ್ಕೆ ಬಾಣಸವಾಡಿಯ 100 ಅಡಿ ರಸ್ತೆಯ ಕಾಫಿ ಬ್ರೇವರಿ ಬಳಿ ಬೆನ್ನಿಗಾನಹಳ್ಳಿ ನಿವಾಸಿ ವಿದ್ಯಾರ್ಥಿ ಅಜಮ್‌ ಅಹಮದ್‌ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಆರೋಪಿಗಳು ಅಜಮ್‌ ಅಹಮದ್‌ನನ್ನು ಅಡ್ಡಗಟ್ಟಿ ಮೊಬೈಲ್‌ ಸುಲಿಗೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next