Advertisement

ಜಗ್ಗೇಶ್‌, ರಮ್ಯಾ, ರಕ್ಷಿತಾ ಟ್ವೀಟ್:‌ ದರ್ಶನ್‌ ಬಂಧನದ ಬಗ್ಗೆ ಸೆಲೆಬ್ರಿಟಿಗಳು ಹೇಳಿದ್ದೇನು?

05:21 PM Jun 12, 2024 | Team Udayavani |

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಲ್ಲಿ ಚಾಲೇಂಜಿಂಗ್‌ ಸ್ಟಾರ್‌ ದರ್ಶನ್‌ ಸೇರಿದಂತೆ 13 ಮಂದಿ ಬಂಧನವಾಗಿದ್ದಾರೆ. ಖ್ಯಾತ ನಟರೊಬ್ಬರು ಇಂಥ ಪ್ರಕರಣದಲ್ಲಿ ಬಂಧನವಾದ ಬೆನ್ನಲ್ಲೇ ಅನೇಕರು ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕೆಂದು ಧ್ವನಿ ಎತ್ತಿದ್ದಾರೆ.

Advertisement

ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ಚಿತ್ರರಂಗದ ಅನೇಕರು ಸೋಶಿಯಲ್‌ ಮೀಡಿಯಾ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವಡೆ ದರ್ಶನ್‌ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ಶುರುವಾಗಿದೆ.

ದರ್ಶನ್‌ ಬಂಧನ ಪ್ರಕರಣದ ಬಳಿಕ ಕನ್ನಡ ಚಿತ್ರರಂಗದ ಕಲಾವಿದರು ಟ್ವೀಟ್‌ ಹಾಗೂ ಪೋಸ್ಟ್‌ ಗಳ ಮೂಲಕ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ನಟಿ ರಮ್ಯಾ ಟ್ವೀಟ್ ವೈರಲ್:‌ 

ನಟಿ ರಮ್ಯಾ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ತಪ್ಪಿತಸ್ಥರಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ನೀಡಬೇಕೆನ್ನುವ ಪೋಸ್ಟ್‌ ವೊಂದನ್ನು ʼಎಕ್ಸ್‌ʼ ನಲ್ಲಿ ಹಂಚಿಕೊಂಡಿದ್ದರು.

Advertisement

“ಸೆಕ್ಷನ್ 302 ರ ಅಡಿಯಲ್ಲಿ ಶಿಕ್ಷೆ ಸಾಬೀತಾದರೆ ದರ್ಶನ್‌ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ಪಡೆಯುವ ಸಾಧ್ಯತೆಯಿದೆ. ಈ ಪ್ರಕರಣದಲ್ಲಿ ಹಣ ಅಥವಾ ಇತರೆ ಅಂಶ ಪರಿಣಾಮ ಬೀರಬಾರದು. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗಬೇಕು” ಎಂದು ಹೇಳಿರುವ ಪೋಸ್ಟ್‌ ವೊಂದನ್ನು ʼಎಕ್ಸ್‌ʼ ನಲ್ಲಿ ರಮ್ಯಾ ರೀಟ್ವೀಟ್‌ ಮಾಡಿದ್ದಾರೆ.

ʼಕರ್ಮʼದ ಬಗ್ಗೆ ಟ್ವೀಟ್‌ ಮಾಡಿ ದರ್ಶನ್‌ ಗೆ ಟಾಂಗ್‌ ಕೊಟ್ರಾ ನವರಸ ನಾಯಕ?

ಸರ್ವಆತ್ಮಾನೇನಬ್ರಹ್ಮ ಸರ್ವ ಜೀವಿಯಲ್ಲಿ ದೇವರಿದ್ದಾನೆ ಯಾರನ್ನು ಕೊಲ್ಲುವ ಹಕ್ಕು ಜೀವನಿಗಿಲ್ಲಾ! ಕರ್ಮ ಜೀವನನ ಹಿಂದೆ ಹಿಂಬಾಲಿಸುತ್ತದೆ ಅವನ ಪಾಪಕರ್ಮ ಅವನ ಸುಡುತ್ತದೆ! ಕಲಿಯುಗದಲ್ಲಿ ದೇವರು ಕಲ್ಲಲ್ಲಾ ಎಲ್ಲಾ ಕರ್ಮಕ್ಕು ತತಕ್ಷಣ ಪಲಿತಾಂಶ ಉಂಟು! ರಾಮನಾಗು ರಾವಣನಾದರೆ ಅಂತ್ಯ ಎಂದಿದೆ ಸನಾತನ ಕೃತಿ! ಮದಕ್ಕೆ ಕಾರುಣ್ಯದ ಅರಿವಿಲ್ಲಾ!

ನಟ ಜಗ್ಗೇಶ್‌ ಮಾಡಿರುವ ಟ್ವೀಟ್‌ ಸದ್ದು ಮಾಡಿದೆ. ಮಾಡಿದ ಕರ್ಮ ಮರಳಿ ಪಡೆಯಲೇ ಬೇಕೆನ್ನುವ ಅರ್ಥವುಳ್ಳ ಟ್ವೀಟ್‌ ಮಾಡಿದ್ದು, ಇದನ್ನು ದರ್ಶನ್‌ ಅವರಿಗೆ ಟಾಂಗ್‌ ನೀಡಲೆಂದು ಹಾಕಿದ್ದಾರೆ ಎನ್ನುವ ಮಾತು ಚರ್ಚೆಗೆ ಗ್ರಾಸವಾಗಿದೆ.

ಈ ಹಿಂದೆ ಜಗ್ಗೇಶ್‌ ಅವರು ದರ್ಶನ್‌ ಅಭಿಮಾನಿಗಳ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್‌ ಆಗಿತ್ತು. ಪರಿಣಾಮ ಫ್ಯಾನ್ಸ್‌ ಗಳು ಶೂಟಿಂಗ್‌ ಸೆಟ್‌ ಮುತ್ತಿಗೆ ಹಾಕಿ ಜಗ್ಗೇಶ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಕೆಲ ಸಮಯ ದರ್ಶನ್‌ – ಜಗ್ಗೇಶ್‌ ಮಾತು ಬಿಟ್ಟಿದ್ದರು.

ಏನು ಹೇಳಲಾಗದ ಸ್ಥಿತಿ ನಟಿ ರಕ್ಷಿತಾ ಪ್ರೇಮ್:‌ ಇನ್ನು ದರ್ಶನ್‌ ಜೊತೆ ಅನೇಕ ಸಿನಿಮಾದಲ್ಲಿ ನಟಿಸಿರುವ ರಕ್ಷಿತಾ ಪ್ರೇಮ್‌ ಘಟನೆ ಬಗ್ಗೆ ಕೇಳಿ ಆಘಾತಕ್ಕೆ ಒಳಗಾಗಿದ್ದಾರೆ. ತನ್ನ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಒಡೆದ ಹಾರ್ಟ್‌ ಸೀಬಲ್‌ ನ ಫೋಟೋವನ್ನು ಹಂಚಿಕೊಂಡು, ತುಂಬಾ ಹೇಳಲು ಬಯಸುತ್ತೇನೆ ಆದರೆ ಏನನ್ನೂ ಹೇಳಲು ಆಗುತ್ತಿಲ್ಲ ಎಂದು ಪೋಸ್ಟ್‌ ಮಾಡಿದ್ದಾರೆ.

ದೇವರ ಬಳಿ ಪ್ರಾರ್ಥನೆ ಮಾಡುತ್ತೇನೆ ಎಂದ ನಟಿ ಸಂಜನಾ: ಸ್ಯಾಂಡಲ್‌ ವುಡ್‌ ನಟಿ ಸಂಜನಾ ಗೆಲ್ರಾನಿ ಅವರು ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಅವರು ಬಂಧನ ಆಗಿರುವ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರ ತಿಳಿದು ಶಾಕ್‌ ಆಗಿದೆ. ದೇವರ ಬಳಿ ಅವರು ಬೇಗ ಬಿಡುಗಡೆ ಆಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ಅವರ ಹೆಸರು ಎಫ್ಐ‌ಆರ್ ನಲ್ಲಿರಬಾರದು ಎಂದು ಕೇಳಿಕೊಳ್ಳುತ್ತೇನೆ. ನನಗೆ ಮಾತೇ ಬರುತ್ತಿಲ್ಲ ಎಂದು ಸಂಜನಾ ವಿಡಿಯೋದಲ್ಲಿ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next