Advertisement

ಇಬ್ಬರು ಮನೆಗಳ್ಳರ ಬಂಧನ : ಲಕ್ಷಾಂತರ ಮೌಲ್ಯದ ಚಿನ್ನಾಭರಣ ಸೇರಿದಂತೆ ಕಳವುಗೈದ ವಸ್ತು ವಶ

08:57 PM Oct 23, 2020 | mahesh |

ಶಿವಮೊಗ್ಗ: ಹೊಳೆ ಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಮನೆಗಳ್ಳತನ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಸಿಪಿಐ ಭದ್ರಾವತಿ ಗ್ರಾಮಾಂತರ ವೃತ್ತ ಅವರ ತಂಡವು ಯಶಸ್ವಿಯಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ಆರೋಪಿಗಳ ಪತ್ತೆಗಾಗಿ ಕೃಷ್ಣಮೂರ್ತಿ ಡಿವೈಎಸ್.ಪಿ ಭದ್ರಾವತಿ ಅವರ ಮಾರ್ಗದರ್ಶನದಲ್ಲಿ,  ಮಂಜುನಾಥ್‌, ಪೊಲೀಸ್ ನಿರೀಕ್ಷಕರು, ಭದ್ರಾವತಿ ಗ್ರಾಮಾಂತರ ವೃತ್ತ ನೇತೃತ್ವದ, ಸುರೇಶ್, ಪಿಎಸ್ಐ,‌ ಹೊಳೆಹೊನ್ನೂರು ಪೊಲೀಸ್ ಠಾಣೆ, ದೇವರಾಜ್‌, ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವು ಕಾರ್ಯಾಚರಣೆ ನಡೆಸಿ, ಆರೋಪಿತರಾದ ಶಶಿ ಕುಮಾರ್ 26 ವರ್ಷ ವಾಸ ಆಗರದಹಳ್ಳಿ ಗ್ರಾಮ ಭದ್ರಾವತಿ ಹಾಗೂ ರವಿ 29 ವರ್ಷ ವಾಸ ದೊಡ್ಡೇರಿ ಗ್ರಾಮ ಭದ್ರಾವತಿರವರನ್ನು ವಶಕ್ಕೆ ಪಡೆದುಕೊಂಡಿದೆ.

ಆರೋಪಿಗಳಿಂದ ಒಟ್ಟು 56 ಗ್ರಾಂ ತೂಕದ ಬಂಗಾರದ ಆಭರಣಗಳು, ಅಂದಾಜು ಮೌಲ್ಯ ರೂ 2.30 ಲಕ್ಷ ಮತ್ತು 140 ಗ್ರಾಂ ತೂಕದ ಬೆಳ್ಳಿ ಆಭರಣಗಳು ಅಂದಾಜು ಮೌಲ್ಯ ರೂ 2 ಸಾವಿರ ಹಾಗೂ ಕೃತ್ಯಕ್ಕೆ ಬಳಸಿದ ಒಂದು ದ್ವಿ ಚಕ್ರ ವಾಹನ ವಶ ಪಡಿಸಿಕೊಳ್ಳಲಾಗಿದೆ ಎಂದು ಎಸ್.ಪಿ. ಕೆ.ಎಂ ಶಾಂತರಾಜು ರವರು ತಿಳಿಸಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next