Advertisement

ಮೂವರು ಕಳ್ಳರ ಬಂಧನ ; 25 ಲಕ್ಷದ ನಗ- ನಾಣ್ಯ ಜಪ್ತಿ

08:19 PM Jun 25, 2021 | Team Udayavani |

ಬೀದರ : ಬೀದರ ಗ್ರಾಮೀಣ ವೃತ್ತ ಮತ್ತು ಮಾರ್ಕೆಟ್ ವೃತ್ತ ವ್ಯಾಪ್ತಿಯಲ್ಲಿ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರು ಅಂತರ ರಾಜ್ಯ ದರೋಡೆಕೋರರನ್ನು ಶುಕ್ರವಾರ ಪೊಲೀಸರು ಬಂಧಿಸಿ ಸುಮಾರು 25 ಲಕ್ಷ ರೂ. ಬೆಲೆ ಬಾಳುವ ನಗ ನಾಣ್ಯ ಜಪ್ತಿ ಮಾಡಿಕೊಂಡಿದ್ದಾರೆ.

Advertisement

ಸಧ್ಯ ನಗರದ ಹೊರವಲಯದ ಗೊರನಳ್ಳಿಯಲ್ಲಿ ನೆಲೆಸಿರುವ ಮಹಾರಾಷ್ಟ್ರದ ನಗರ ನಿಲಂಗಾದ ಕೃಷ್ಣ ಶಿವಾಜಿ ಭೋಸ್ಲೆ (40), ಉಪ್ಲೆಯ ವಿಜಯ ಹರಿಶ್ಚಂದ್ರ ಸಿಂಧೆ (26) ಮತ್ತು ಜನವಾಡಾದಲ್ಲಿ ನೆಲೆಸಿರುವ ನಗರ ನಿಲಂಗಾದ ಶಿವಮಣಿ ಸಂತೋಷ ಭೋಸ್ಲೆ (20) ಬಂಧಿತ ಆರೋಪಿತರು. ತಾಲೂಕಿನ ಘೋಡಂಪಳ್ಳಿ ಗ್ರಾಮದಲ್ಲಿ ಕಳೆದ ಮೇ 14ರಂದು ಮನೆಯೊಂದರಲ್ಲಿ ಕಳ್ಳತನ ಘಟನೆ ನಡೆದಿದ್ದು, ಈ ಕುರಿತು ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಪಿಐ ಶ್ರೀಕಾಂತ ಅಲ್ಲಾಪೂರ ನೇತೃತ್ವದ ವಿಶೇಷ ತಂಡ ಈ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದಾಗ ಈ ಕೃತ್ಯ ಬಯಲಾಗಿದೆ.

ಘೋಡಂಪಳ್ಳಿ ಗ್ರಾಮದ ಕಳ್ಳತನ ಪ್ರಕರಣ ಜತೆಗೆ ಬೀದರ ಗ್ರಾಮೀಣ ವೃತ್ತ ಮತ್ತು ಮಾರ್ಕೆಟ್ ವೃತ್ತ ವ್ಯಾಪ್ತಿಯಲ್ಲಿ ನಡೆದ ಒಟ್ಟು 7 ಪ್ರಕರಣಗಳಲ್ಲಿ ಈ ಕಳ್ಳರು ಭಾಗಿಯಾಗಿದ್ದರು. ಬಂಧಿತರಿಂದ 25 ತೊಲೆ ಬಂಗಾರದ ಆಭರಣಗಳು, 40 ತೊಲೆ ಬೆಳ್ಳಿ ಆಭರಣ, 12 ಲಕ್ಷ ರೂ. ನಗದು ಮತ್ತು ಒಂದು ಬೈಕ್ ಸೇರಿ ಒಟ್ಟು 25 ಲಕ್ಷ ರೂ. ಬೆಲೆಯ ಕಳ್ಳತನದ ಸ್ವತ್ತನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್ ಅವರು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪಿಎಸ್‌ಐಗಳಾದ ಮಹೆಬೂಬ್ ಅಲಿ, ಸುವರ್ಣಾ, ಸಂತೋಷ, ಸಿಬ್ಬಂದಿಗಳಾದ ದಿಲೀಪಕುಮಾರ ಮುರ್ಕಿ, ನವೀನ್, ಮಲ್ಲಿಕಾರ್ಜುನ ಮುರ್ಕಿ, ಸಂಜಪ್ಪ ಒಡೆಯರ್, ಸತೀಶ ರಮಖಾನೆ, ಶಿವಶಂಕರ, ರೇವಣಪ್ಪ, ಇಸಾಕ್, ಫಾರುಕ್, ಹಣಮಂತ, ಚಂದ್ರಕಾಂತ, ಮಲ್ಲಿಕಾರ್ಜುನ ಕೆಂಚೆ, ರಾಜು ಪವಾರ್, ಸೂರ್ಯಕಾಂತ, ಜಾರ್ಜ್ ಮತ್ತು ವಿಜಯಕುಮಾರ ತಂಡದಲ್ಲಿದ್ದರು. ಪ್ರಕರಣವನ್ನು ಬೇಧಿಸಿರುವ ವಿಶೇಷ ತಂಡಕ್ಕೆ ಎಸ್‌ಪಿ ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next