Advertisement

Arrest of thieves: ಪೊಲೀಸರ ನಿದ್ದೆಗೆಡಿಸಿದ್ದ ನಾಲ್ವರು ಕಳ್ಳರ ಬಂಧನ

03:20 PM Sep 07, 2023 | Team Udayavani |

ಕೋಲಾರ: ಕಳೆದ ನಾಲ್ಕೈದು ತಿಂಗಳುಗಳಿಂದ ಮನೆಗಳ್ಳತನ, ಕಿಕ್ಕಿರಿದ ಬಸ್‌ಗಳಲ್ಲಿ ಕಿಸೆಗಳ್ಳತನ, ದೇವಸ್ಥಾನ ಹುಂಡಿಗಳ ಒಡೆ ದು ಕಳುವು ಮಾಡುತ್ತಾ ಸಾರ್ವಜನಿಕರ ನಿದ್ದೆಗೆಡಿ ಸಿದ್ದ ಪೈಕಿ ನಾಲ್ವರು ಕಳ್ಳರನ್ನು ಬಂಧಿಸಿ ಆರೋಪಿಗಳಿಂದ ಮಾಲು ವಶಪಡಿಸಿಕೊಳ್ಳುವಲ್ಲಿ ಕೋಲಾರ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಬಂಧಿತರನ್ನು ಮುಳಬಾಗಿಲು ಹೊಸಪಾಳ್ಯದ ಶಂಕರ, ಬಂಗಾರಪೇಟೆ ತಾಲೂಕು ಕ ಣಿಂಬೆಲೆ ವಾಸಿ ವೆಂಕಟೇಶ್‌, ಮುಳಬಾಗಿಲು ತಾಲೂರು ಮರಹೇಡು ಗ್ರಾಮದ ವಾಸಿ ಖಾ ದರ್‌ ಪಾಷಾ ಅಲಿಯಾಸ್‌ ತೋಟಕನ ಬಾಬು, ಕೋಲಾರ ತಾಲೂಕು ಹೊಲ್ಲಂಬಳ್ಳಿ ವಾಸಿ ಚರಣ್‌ರಾಜ್‌ ಎಂದು ಗುರುತಿಸಲಾಗಿದೆ.

ಇತ್ತೀಚಿಗೆ ಕೋಲಾರ ಮತ್ತು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಹಲವು ಕಳುವು ಪ್ರಕರಣಗಳ ಪತ್ತೆಗಾಗಿ ಎಸ್ಪಿ ನಾರಾಯಣ್‌ ನೇತೃತ್ವದಲ್ಲಿ ಪಿಎಸ್‌ಐ ಅಣ್ಣಯ್ಯ ಮತ್ತು ಕ್ರೈಂ ಸಿಬ್ಬಂದಿ ಖಾದರ್‌ ಪಾಷಾ ಮತ್ತು ನಾಲ್ವರು ಸಹಚರರು ಕೋಲಾರದ ಬೆಥೆಲ್‌ ನಗರದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾರಕಾಸ್ತ್ರ ತೋರಿಸಿ ವಾಹನ ಸವಾರರನ್ನು ಬೆದರಿಸಿ ಡಕಾಯಿತಿ ಮಾಡಲು ಪ್ರಯತ್ನಿಸುತ್ತಿದ್ದಾಗ ಪೊಲೀಸರು ದಾಳಿ ಮಾಡಿ ಶಂಕರ್‌, ವೆಂಕಟೇಶ್‌ರನ್ನು ವಶಕ್ಕೆ ಪಡೆದು ಅವರ ಬಳಿಯಿದ್ದ ಕಬ್ಬಿಣದ ರಾಡು,ಕಟ್ಟರ್‌, ಸ್ಪ್ಯಾನರ್‌, ಗ್ಲೌಸು, ಮಾಸ್ತ್, ದ್ವಿಚಕ್ರ ವಾಹನವಶಪಡಿಸಿಕೊಂಡಿದ್ದರು.

175 ಗ್ರಾಂ ಚಿನ್ನ ವಶ: ಇವರು ನೀಡಿದ ಸುಳಿವಿನ ಮೇರೆಗೆ ಖಾದರ್‌ಪಾಷಾ, ಆದಿಲ್‌ ಪಾಷಾ ಮತ್ತು ಚರಣ್‌ರಾಜ್‌ ಓಡಿ ಹೋಗಿ ತಲೆ ಮರೆಸಿಕೊಂಡಿದ್ದರು. ಈ ಪೈಕಿ ಚರಣ್‌ ರಾಜ್‌ರನ್ನು ಬಂಧಿಸುವಲ್ಲಿ ಸಫಲರಾಗಿದ್ದರು. ಓಡಿ ಹೋಗಿರುವ ಆದಿಲ್‌ ಪಾಷಾ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಬಂಧಿತ ಆರೋಪಿಗಳನ್ನು ಹೆಚ್ಚಿನ ತನಿಖೆಗೊಳಪಡಿಸಿ ದಾಗ ಕೋಲಾರ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣದಲ್ಲಿ ಕಳುವಾಗಿದ್ದ 5 ಪ್ರಕರಣಗಳಲ್ಲಿ, ಅರಾಭಿಕೊತ್ತನೂರು ಗ್ರಾಮದ ಹುಂಡಿ ಕಳ್ಳತನ, ಸಿಬಿಐಟಿ ಕಾಲೇಜಿನಲ್ಲಿ ಜರುಗಿದ್ದ ನಗದು ಹಣ ಕಳ್ಳತನ ಪ್ರಕರಣ ಪತ್ತೆಯಾಗಿತ್ತು. ಬಂಧಿತರಿಂದ 175 ಗ್ರಾಂ ಚಿನ್ನ, 10 ಸಾವಿರ ರೂ ನಗದನ್ನು ವಶಪಡಿಸಿಕೊಳ್ಳಲಾಗಿತ್ತು.

Advertisement

ಪೊಲೀಸರ ಕಾರ್ಯಕ್ಕೆ ಶ್ಲಾಘನೆ: ಈ ಕಾರ್ಯಾಚರಣೆಯಲ್ಲಿ ನಗರ ಠಾಣೆ ಇನ್ಸ್‌ಪೆಕ್ಟರ್‌ ಹರೀಶ್‌, ಜಿಲ್ಲಾ ಅಪರಾಧ ಪತ್ತೆ ದಳದ ಪಿಎಸ್‌ಐ ಅಣ್ಣಯ್ಯ, ಸಿಬ್ಬಂದಿರಾಘವೇಂದ್ರ, ಆಂಜನಪ್ಪ, ರಮೇಶ್‌, ವಿನಾಯಕ, ರಾಜೇಶ್‌, ತಾಂತ್ರಿಕ ವಿಭಾಗದ ನಾಗರಾಜ್‌ರ ತಂಡವನ್ನು ಕೋಲಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ ಶ್ಲಾಘಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next