Advertisement

ಉಗ್ರರ ಬಂಧನ: ಸದನದಲ್ಲಿ ಹೇಳಿಕೆ ನೀಡಿದ ಗೃಹ ಸಚಿವ ಡಾ| ಜಿ. ಪರಮೇಶ್ವರ್‌

11:03 PM Jul 19, 2023 | Team Udayavani |

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಉಗ್ರರ ಬಂಧನಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಅವರು ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದು, ಪೊಲೀಸರು ಸಮಯ ಪ್ರಜ್ಞೆಯಿಂದ ಈ ದುಷ್ಕೃತ್ಯ ತಡೆದಿದ್ದಾರೆ. ಆರೋಪಿಗಳು ಯಾವ ನಿಷೇಧಿತ ಭಯೋತ್ಪಾದಕ ಸಂಘಟನೆಗೆ ಸೇರಿದವರೆಂಬುದು ತನಿಖೆಯಿಂದ ಪತ್ತೆಯಾಗಬೇಕಿದೆ ಎಂದು ಹೇಳಿದ್ದಾರೆ.

Advertisement

ವಿಧಾನಸಭೆಯಲ್ಲಿ ಬಿಜೆಪಿ ಧರಣಿ ನಡೆಸುತ್ತಿರುವಾಗಲೇ ಗೃಹ ಸಚಿವರ ಹೇಳಿಕೆಗೆ ಸ್ಪೀಕರ್‌ ಅವಕಾಶ ಮಾಡಿಕೊಟ್ಟರು. ಆದರೆ ಗದ್ದಲದಿಂದ ಎರಡು ಬಾರಿ ಇದು ಮುಂದೂಡಿಕೆಯಾಯಿತು. ಇದರಿಂದ ಸಿಟ್ಟಿಗೆದ್ದ ಸ್ಪೀಕರ್‌ ಈ ರಾಜ್ಯದ ಹಿತ ಕಾಯುವ ಕೆಲಸವನ್ನು ಪೊಲೀಸರು ಮಾಡಿದ್ದಾರೆ. ಆ ಬಗ್ಗೆ ಗೃಹ ಸಚಿವರು ಹೇಳಿಕೆ ನೀಡುತ್ತಾರೆ. ದೇಶಪ್ರೇಮ ಇದ್ದರೆ ಅವರ ಹೇಳಿಕೆಯನ್ನು ಕೇಳಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗದ್ದಲ ತುಸು ಕಡಿಮೆಯಾದ ಹಿನ್ನೆಲೆಯಲ್ಲಿ ಘಟನೆಗೆ ಸಂಬಂಧಪಟ್ಟ ಸುದೀರ್ಘ‌ ಹೇಳಿಕೆಯನ್ನು ಗೃಹ ಸಚಿವ ಡಾ| ಜಿ.ಪರಮೇಶ್ವರ ಸದನಕ್ಕೆ ವಿವರಿಸಿದರು.

ಎರಡು ದಿನದಲ್ಲಿ ರಕ್ತಪಾತ ಕಾದಿತ್ತೇ?
ಗೃಹ ಇಲಾಖೆಯ ಉನ್ನತ ಮೂಲಗಳ ಪ್ರಕಾರ ದುಷ್ಕರ್ಮಿಗಳು ಮುಂದಿನ ಎರಡು ದಿನದ ಅವಧಿಯಲ್ಲಿ ಬೆಂಗಳೂರಿನಲ್ಲಿ ಭಯಾನಕ ರಕ್ತಪಾತ ನಡೆಸಲು ಸಂಚು ನಡೆಸಿದ್ದರು. ಸಿಎಂ ಸಿದ್ದರಾಮಯ್ಯ ಅವರಿಗೆ ಘಟನೆಗೆ ಸಂಬಂಧಪಟ್ಟಂತೆ ಬ್ರಿàಫ್ ಮಾಡುವ ಸಂದರ್ಭ ಗೃಹ ಸಚಿವರು ಈ ಮಾಹಿತಿಯನ್ನು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next