ಸಾಗರ: ತಾಲೂಕಿನ ಪಡವಗೋಡು ಗ್ರಾ.ಪಂ. ವ್ಯಾಪ್ತಿಯ ಕೆರೋಡಿ ಗ್ರಾಮದಲ್ಲಿ 2012ರಲ್ಲಿ 70 ವರ್ಷದ ವೃದ್ಧನ ಕೊಲೆಗೆ ಸಂಬಂಧಪಟ್ಟಂತೆ ಹೈಕೋರ್ಟ್‌ನಿಂದ ಜೀವಾವಧಿ ಶಿಕ್ಷೆಗೊಳಗಾಗಿದ್ದರೂ ತಲೆಮರೆಸಿಕೊಂಡಿದ್ದ ಆರೋಪಿ ಯನ್ನು ಮೃತ ವೃದ್ಧನ ಮಕ್ಕಳ ನೆರವಿನಿಂದ ಬಂಧಿ ಸುವಲ್ಲಿ ನಗರ ಠಾಣೆ ಪೊಲೀಸರು ಯಶಸ್ವಿ ಯಾಗಿದ್ದಾರೆ. ಕೇರಳದ ಪಾಲಕ್‌ಕಾಡ್‌ನಲ್ಲಿ ಆರೋಪಿ ಶಿಜು ಕುರಿಯನ್‌ನನ್ನು ಬಂಧಿಸಲಾಗಿದೆ.
ಮಕ್ಕಳು ವಿದೇಶದಲ್ಲಿದ್ದ ಹಿನ್ನೆಲೆ :
ಯಲ್ಲಿ ಕೆರೋಡಿ ಗ್ರಾಮದ ಜೋಸ್ ಫಾಕನ್ ಅವರು ಮನೆಯಲ್ಲಿ ಒಬ್ಬರೇ ಇದ್ದರು. ಅವರ ತೋಟ ದಲ್ಲಿ ಕೆಲಸ ಮಾಡುತ್ತಿದ್ದ ಶಿಜು, ಮಾಲಕನನ್ನು ಕೊಲೆ ಮಾಡಿ ಕೊಟ್ಟಿಗೆ ಹಿಂಭಾಗದಲ್ಲಿದ್ದ ಗೊಬ್ಬರದ ಗುಂಡಿಯಲ್ಲಿ ಹೂತುಹಾಕಿದ್ದ. ಈ ಕೊಲೆ ಬೆಳಕಿಗೆ ಬಂದಿದ್ದರೂ ಸಾಗರ ನ್ಯಾಯಾಲಯದಲ್ಲಿ ಸರಿಯಾದ ಸಾûಾÂಧಾರಗಳು ದೊರಕದೆ ಆರೋಪಿ 2013ರಲ್ಲಿ ಬಿಡುಗಡೆಯಾಗಿದ್ದನು.
ಆದರೆ ಸರಕಾರಿ ಅಭಿಯೋಜಕ ವಿ.ಜಿ.ಯಳಗೇರಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಶಿಫಾರಸು ಮಾಡಿದ್ದರು. ಅಲ್ಲಿ ಕಳೆದ ವರ್ಷದ ಮಾರ್ಚ್ 20ರಂದು ತೀರ್ಪು ಪ್ರಕಟಗೊಂಡು, ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾ ಧಿಗೆ ಜೀವಾವ ಧಿ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿ ಧಿಸಿತ್ತು.
ಆರೋಪಿ ಪತ್ತೆ ಮಾಡಿದ ಮಕ್ಕಳು:
ಹೈಕೋರ್ಟ್‌ನಲ್ಲಿ ತೀರ್ಪು ಬರುವ ಮೊದಲೇ ಆರೋಪಿ ಶಿಜು ಕೇರಳಕ್ಕೆ ಪರಾರಿಯಾಗಿದ್ದರಿಂದ ಪೊಲೀಸರು ಪತ್ತೆ ಕಾರ್ಯ ಕೈಚೆಲ್ಲಿದ್ದರು. ಈ ವೇಳೆ ಜೋಸ್ ಅವರ ಮಕ್ಕಳಾದ ಸಾಜಿತ್ ಮತ್ತು ರಣಜಿ ಕೇರಳಕ್ಕೆ ಹೋಗಿ ಆರೋಪಿಯ ಇರುವಿಕೆಯನ್ನು ಪತ್ತೆ ಮಾಡಿ ಪೋಲಿಸರಿಗೆ ಮಾಹಿತಿ ನೀಡಿದ್ದರಿಂದ ಪೋಲಿಸರು ಆತನನ್ನು ಬಂಧಿಸಿದ್ದಾರೆ.