Advertisement

ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆಗೈಯ್ಯುತ್ತಿದ್ದ  ಏಳು ಜನರ ಬಂಧನ

01:40 PM Aug 19, 2022 | Team Udayavani |

ವಿಜಯಪುರ: ವಿಜಯಪುರ ನಗರ ಹಾಗೂ ಹೆದ್ದಾರಿಗಳಲ್ಲಿ ಸಂಚರಿಸುತ್ತಿದ್ದ ಜನರನ್ನು ಮಾರಕಾಸ್ತ್ರಗಳಿಂದ ಬೆದರಿಸಿ ದರೋಡೆ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಮೂವರು ಸೇರಿದಂತೆ ಒಟ್ಟು ಏಳು ಜನರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಇಟ್ಟಂಗಿಹಾಳ ದೊಡ್ಡಿಯ ನಿವಾಸಿ ವಿಜಯ ಭೀರಪ್ಪ ಕರಾಡೆ (23), ಆನಂದ ಮಾಯಪ್ಪ ಡೇರೆ, ಹಣಮಂತ ಜಯಪ್ಪ ಖರಾತ (20), ಬಬಲಾದಿ ಗ್ರಾಮದ ನಿವಾಸಿ ಸಚಿನ್ ಮಧು ಗೋಪಣೆ (20), ಮಹಾರಾಷ್ಟ್ರದ ತಿಕ್ಕುಂಡಿ ಕರೆವಾಡಿ ಮೂಲದ ನಿವಾಸಿ ನವನಾಥ ಅಮಗೊಂಡ ಕರಾಡೆ (20), ಸಚಿನ್ ವಿಕಾಸ ಕಾಳೆ (21), ವಿಕಾಸ ಲಕ್ಷ್ಮಣ ಢಾಣೆ (20) ಬಂಧಿತರು.  ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಇತರೆ ಮೂವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಬಂಧಿತರಿಂದ ಕೃತ್ಯಕ್ಕೆ ಬಳಸುತ್ತಿದ್ದ ಮಚ್ಚು, ಕುಡಗೋಲು, ಬಡಿಗೆ, ವೈರ್ ಪೈಪ್, ಮೊಬೈಲ್, ಖಾರದ ಪುಡಿ, ಮೂರು ಬೈಕ್ ಸೇರಿದಂತೆ 5.13 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ವಿಜಯಪುರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಇಟ್ಟಂಗಿಹಾಳ ಕ್ರಾಸ್ ಹತ್ತಿರ ಆ.8 ರಂದು ಹಾಗೂ ಆ.12 ಹಂಚಿನಾಳ ತಾಂಡಾ ಹತ್ತಿರ ಮೂರು ಬೈಕಗಳ ಮೇಲೆ ಬಂದಿದ್ದ ಆರೇಳು ಜನರ ತಂಡ, ಮಾರಕಾಸ್ತ್ರಗಳಿಂದ ಬೆದರಿಸಿ, ಹಣ,‌ ಮೊಬೈಲ್ ಸೇರಿದಂತೆ ಇತರೆ ವಸ್ತುಗಳನ್ನು ದೋಚಿದ ಬಗ್ಗೆ ದೂರುಗಳು ದಾಖಲಾಗಿದ್ದವು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಆನಂದಕುಮಾರ, ಡಿಎಸ್ಪಿ ಸಿದ್ದೇಶ್ವರ ಹಾಗೂ ಗ್ರಾಮೀಣ ವಲಯ ಸಿಪಿಐ ಸಂಗಮೇಶ ಪಾಲಭಾವಿ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿದ್ದರು.

Advertisement

ಇದನ್ನೂ ಓದಿ:ಕೊಡಗಿನಲ್ಲಿ ಬಿಜೆಪಿಯವರು ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದಿರುವುದು ಕೆಟ್ಟ ಸಂಸ್ಕಾರ

ಆರೋಪಿಗಳು ಮಧ್ಯರಾತ್ರಿ ವೇಳೆ ಮಾರಕಾಸ್ತ್ರ ಹಿಡಿದು ನಗರದ ಪ್ರಮುಖ ರಸ್ತೆಗಳಲ್ಲಿ ಓಡಾಡು ದೃಶ್ಯಗಳು ಸಿ.ಸಿ.‌ ಕೆಮೆರಾದಲ್ಲಿ ಸೆರೆಯಾಗಿತ್ತು. ಶುಕ್ರವಾರ ಏಳು ಆರೋಪಿಗಳು ಸಂಶಯಾಸ್ಪದ ರೀತಿಯಲ್ಲಿ ಓಡಾತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿರುವ ತನಿಖಾ ತಂಡದ ಕಾರ್ಯವನ್ನು ಶ್ಲಾಘಿಸಿರುವ ಎಸ್ಪಿ ಆನಂದಕುಮಾರ ನಗದು ಬಹುಮಾನ ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next