Advertisement

ಮಿಸೆಸ್‌ ಶ್ರೀಲಂಕಾ ಸ್ಪರ್ಧಿ ಬಂಧನ

09:21 AM Apr 09, 2021 | Team Udayavani |

ಕೊಲೊಂಬೋ: ದ್ವೀಪ ರಾಷ್ಟ್ರ ಶ್ರೀಲಂಕಾದ “ಮಿಸೆಸ್‌ ಶ್ರೀಲಂಕಾ’ ಸ್ಪರ್ಧೆಯ ಕಳೆದ ವರ್ಷದ ವಿಜೇತೆ ಕ್ಯಾರಲೈನ್‌ ಜೂರಿ ಅವರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.

Advertisement

ಪ್ರಸಕ್ತ ಸಾಲಿನ ಸ್ಪರ್ಧೆಯಲ್ಲಿ ಗೆದ್ದಿದ್ದ ಪುಷ್ಪಿಕಾ ಡಿ ಸಿಲ್ವಾ ಅವರ ಮೇಲೆ ವೇದಿಕೆಯಲ್ಲೇ ಹಲ್ಲೆ ನಡೆಸಿ ಗಾಯಗೊಳಿಸಿದ್ದರು ಎಂದು ಆರೋಪಿಸಲಾಗಿತ್ತು.

ಗೆದ್ದಿದ್ದ ಕಿರೀಟವನ್ನು ಕ್ಯಾರಲೈನ್‌ ಜೂರಿ ಎಳೆದು ಪಡೆದಿದ್ದರು. ಇದರಿಂದಾಗಿ ದುಃಖೀತರಾಗಿ ಡಿ ಸಿಲ್ವಾ ವೇದಿಕೆಯಿಂದ ತೆರಳಿದ್ದರು. ಕಿರೀಟ ಹಾಕಲು ಬಂದಿದ್ದ ಜೂರಿ, “ಡಿ ಸಿಲ್ವಾ ವಿಚ್ಛೇದನ ಪಡೆದಿದ್ದಾರೆ‌. ಹೀಗಾಗಿ ಸ್ಪರ್ಧೆಯಲ್ಲಿ ಭಾಗವಹಿಸಲು ಅನರ್ಹರು.  ಮೊದಲ ರನ್ನರ್‌ ಅಪ್‌ಗೆ ಪ್ರಶಸ್ತಿ ಸೇರಬೇಕು’ ಎಂದು ಜೂರಿ ಹೇಳಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next