ಬೆಂಗಳೂರು: ಗಾಂಜಾ ಕೇಳಿದ ವ್ಯಕ್ತಿಯನ್ನು ದೊಣ್ಣೆಯಿಂದ ಹೊಡೆದು ಕೊಂದಿದ್ದ ನಾಲ್ವರು ಆರೋಪಿಗಳು ಕಲಾಸಿಪಾಳ್ಯ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕಲಾಸಿಪಾಳ್ಯ ನಿವಾಸಿಗಳಾದ ಸೈಯದ್ ಆಸೀಫ್ (39), ಸದ್ದಾಂ ಪಾಷಾ(30), ಸಲ್ಮಾನ್ (30) ಮತ್ತು ಸಿರಾಜುದ್ದೀನ್ ಅಲಿಯಾಸ್ ಪೆಟ್ರೋಲ್ ಸಿರಾಜ್ (63) ಬಂಧಿತರು.
ಆರೋಪಿಗಳು ಅ.8ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಗಾಂಜಾ ಕೇಳಿದ ಈಜಿಪುರ ನಿವಾಸಿ ಡೊಮಿನಿಕ್ ಎಂಬಾತನಿಗೆ ದೊಣ್ಣೆ ಯಿಂದ ಹೊಡೆದು ಕೊಂದಿದ್ದರು ಎಂದು ಪೊಲೀಸರು ಹೇಳಿದರು.
ಡೊಮಿನಿಕ್ ಏಳು ವರ್ಷಗಳ ಹಿಂದೆ ಜೆನಿಫರ್ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದು, ಮುಂಬೈನಲ್ಲಿ ವಾಸವಾಗಿದ್ದ. ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ಎಂಟು ತಿಂಗಳ ಹಿಂದೆ ಕೌಟುಂಬಿಕ ವಿಚಾರವಾಗಿ ಪತ್ನಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ. ಮದ್ಯ, ಮಾದಕ ವಸ್ತುಗಳ ದುಶ್ಚಟಗಳ ದಾಸನಾಗಿದ್ದ ಡೊಮಿನಿಕ್‌ನನ್ನು ಪುನ ಶ್ಚೇ ತನ (ರೆಹ್ಯಾ ಬಿಲಿಟೇಷನ್) ಕೇಂದ್ರಕ್ಕೆ ಸೇರಿಸಲಾಗಿತ್ತು. ಕಳೆದ 7 ತಿಂಗಳಿಂದ ಚೆನ್ನೈನಲ್ಲಿ ಕೆಲಸ ಮಾಡಿಕೊಂಡಿದ್ದ
ಡೊಮಿನಿಕ್, ಯಾರಿಗೂ ತಿಳಿಸದೆ ಬೆಂಗಳೂರಿಗೆ ಬಂದಿದ್ದನು.
ಅ.8ರಂದು ಮಧ್ಯಾಹ್ನ ಕಲಾಸಿಪಾಳ್ಯದ ಕನಕಪುರ ಬಸ್ ನಿಲ್ದಾಣ ಬಳಿ ಕುಳಿತಿದ್ದ ಆರೋಪಿಗಳ ಬಳಿ ಗಾಂಜಾ ಕೇಳಿದ್ದಾನೆ. ಆಗ ಆರೋಪಿಗಳು ಕೊಡುವುದಿಲ್ಲ ಎಂದಿದ್ದಾರೆ. ಅದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದ್ದು, ಆಗ ಆಕ್ರೋಶಗೊಂಡ ಆರೋಪಿಗಳು ದೊಣ್ಣೆಯಿಂದ ಡೊಮಿನಿಕ್‌ಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಡೊಮಿನಿಕ್‌ನನ್ನು ಸ್ಥಳೀಯ ಪೊಲೀಸರು ಚಿಕಿತ್ಸೆ ಕೊಡಿಸಿ, ಆತನ ಕೋರಿಗೆ ಮೇರೆಗೆ ಸ್ನೇಹಿತ ವಿನಯ್‌ಗೆ ಕರೆ ಮಾಡಿ ಕಳುಹಿಸಿದ್ದರು. ಮರು ದಿನ ಬೆಳಗ್ಗೆ ಡೊಮಿನಿಕ್‌ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಮಾದಕ ವಸ್ತುವಿನ ಅಮಲಿನಲ್ಲಿ ದುಷ್ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಹೇಳಿದರು. ಕಲಾಸಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.