Advertisement

ಬೈಕ್‌ ಕಳ್ಳರ ಬಂಧನ: 2 ಬೈಕ್‌ ಜಪ್ತಿ

05:31 PM Aug 12, 2022 | Team Udayavani |

ಬಸವಕಲ್ಯಾಣ: ನಗರದ ಅಂಗಡಿ, ಹೋಟೆಲ್‌ಗ‌ಳ ಮುಂದೆ ನಿಲ್ಲಿಸಿದ ಬೈಕ್‌ ಕದಿಯುತಿದ್ದ ಇಬ್ಬರು ಕಳ್ಳರನ್ನು ಬಂಧಿಸಿ, ಅವರಿಂದ 2 ಬೈಕ್‌ ಜಪ್ತಿ ಮಾಡುವಲ್ಲಿ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ನಗರದ ಖಡಿಝಂಡಾ ಬಡಾವಣೆ ನಿವಾಸಿ ದಿಲೀಪ್‌ ಗಾಯಕವಾಡ ಮತ್ತು ಹುಮನಾಬಾದ ಪಟ್ಟಣದ ವಾಂಜರಿ ನಿವಾಸಿ ರಾಜು ಇಳಗಾರ ಬಂಧಿತ ಆರೋಪಿಗಳು.

ನಗರದ ಖಡಿಝಂಡಾ ಬಡಾವಣೆ ಹಾಗೂ ನಗರ ರಾಜಬಾಗ್‌ ಸವಾರ್‌ ದರ್ಗಾದ ಬಳಿ ನಿಲ್ಲಿಸಿದ ಬೈಕ್‌ಗಳನ್ನು ಬಂಧಿತರು ಕಳವು ಮಾಡಿದ್ದರು. ಎಸ್ಪಿ ಡೆಕ್ಕಾ ಕಿಶೋರಬಾಬು, ಎಎಸ್ಪಿ ಶಿವಾಂಸು ರಾಜಪುತ್‌, ಸಿಪಿಐ ರಘುವೀರ್‌ಸಿಂಗ್‌ ಠಾಕೂರ ಮಾರ್ಗದರ್ಶನದಲ್ಲಿ ತಕ್ಷಣ ಕಾರ್ಯಚರಣೆ ನಡೆಸಿದ ನಗರ ಠಾಣೆ ಪಿಎಸ್‌ಐ ಅಮರ ಕುಲ್ಕರ್ಣಿ, ಅಪರಾಧ ವಿಭಾಗದ ಪಿಎಸ್‌ಐ ರೇಣುಕಾ ನೇತೃತ್ವದಲ್ಲಿ ಸಿಬ್ಬಂದಿಗಳಾದ ಫ್ರಾಂಚೀಸ್‌, ಸೀಮನ್‌, ಅಶೋಕ ಪವಾರ್‌, ಯಶ್ರಫ್‌ ಕಾಜ್ಮಿ ಅವರನ್ನೊಳಗೊಂಡ ತಂಡ ಇಬ್ಬರು ಕಳ್ಳರನ್ನು ಬಂಧಿಸಿ ಅವರಿಂದ 80 ಸಾವಿರ ರೂ. ಮೌಲ್ಯದ ಎರಡು ಬೈಕ್‌ಗಳನ್ನು ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next