ಸಿದ್ದಾಪುರ: ಕೋವಿಡ್-19 ಪಾಸಿಟಿವ್ ಪ್ರಕರಣಗಳಿಗೆ ಸಂಬಂಧಿಸಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ರೂ. 3.50ಲಕ್ಷ ಹಣ ಪಡೆಯುತ್ತಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ ಯುವಕನನ್ನು ಶಂಕರನಾರಾಯಣ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಬಂಧಿತ ಆರೋಪಿ ಕುಂದಾಪುರ ತಾಲೂಕು ಕಮಲಶಿಲೆ ನಿವಾಸಿ ಸುರೇಶ ಕುಲಾಲ (27). ಇಂತಹ ಸುಳ್ಳು ಸುದ್ಧಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಜಿಲ್ಲೆಯ ಜನತೆಯನ್ನು ಮತ್ತಷ್ಟು ಆತಂಕಕ್ಕೆ ದೂಡುವ ಪ್ರಯತ್ನ ನಡೆಸುತ್ತಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಆರೋಪಿ ಸುರೇಶ ಕುಲಾಲ ಸಾಮಾಜಿಕ ಜಾಲ ತಾಣದಲ್ಲಿ, ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನಲ್ಲಿ 14 ದಿನಗಳ ಕಾಲ ಕ್ವಾರಂಟೆನ್ ಮುಗಿಸಿ ಬಂದು ಯಾವುದೇ ಲಕ್ಷಣಗಳು ಇಲ್ಲದೆ ಇದ್ದರು ಆರೋಗ್ಯ ತಪಾಸಣೆ ಅಂತ ಹೇಳಿ ಕೋವಿಡ್-19 ನೆಪದಲ್ಲಿ ಕೂಡಿಹಾಕಿ ಪ್ರತಿ ಕೇಸಿಗೆ ರೂ.3.50ಲಕ್ಷ ಹಣ ಮಾಡುವ ದಂದೆ ಶುರುವಾಗಿದೆ. ಎಲ್ಲಾ ಸಿಬಂದಿವರ್ಗದವರು ಸೇರಿ ಪಾಸಿಟಿವ್ ಬಗ್ಗೆ ರಿಪೋರ್ಟ್ ಕೇಳಿದ್ರು ಕೊಡಲ್ಲ. ಇದರ ಬಗ್ಗೆ ಸೂಕ್ತ ವ್ಯಕ್ತಿಯನ್ನು ಭೇಟಿ ಮಾಡಿ, ನಿಮ್ಮ ಮಾಧ್ಯಮದಲ್ಲಿ ವರದಿ ಕೊಡಬೇಕು. ಬಡ ಜನರ ಜೀವನ ಜತೆಗೆ ಆಟ ಆಡುವವರ ವಿರುದ್ಧ ಧ್ವನಿ ಎತ್ತಿ ಸೂಕ್ತ ನ್ಯಾಯ ಕೊಡಿಸುವರೆ ಇಂತಿ ನಿಮ್ಮ ಸುರೇಶ ಕುಲಾಲ ಕಮಲಶಿಲೆ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ.
ಇಂತಹ ಸುಳ್ಳು ಸುದ್ಧಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಜಿಲ್ಲೆಯ ಜನತೆಯನ್ನು ಮತ್ತಷ್ಟು ಆತಂಕಕ್ಕೆ ದೂಡುವ ಪ್ರಯತ್ನ ನಡೆಸುತ್ತಿದ್ದಾನೆ. ಕೋವಿಡ್-19 ವೈರಸ್ ವಿರುದ್ಧ ಶ್ರಮವಹಿಸಿ ಕೆಲಸ ಮಾಡುತ್ತಿರುವ ಎಲ್ಲಾ ಇಲಾಖೆಗಳು ಕರ್ತವ್ಯ ನಿರ್ವಹಿಸಲು ಆತ್ಮಸ್ಥೆರ್ಯ ಕುಗ್ಗುವಂತೆ ಮತ್ತು ಇಲಾಖೆಗಳ ವಿರುದ್ಧ ಸುಳ್ಳು ಮಾಹಿತಿ ಸಾರ್ವಜನಿಕರಲ್ಲಿ ಆಶಾಂತಿ ಮತ್ತು ಅನುಮಾನ ಮೂಡಿಸುವಂತೆ ಮಾಡಿದ್ದಾನೆ. ಈ ಆರೋಪಿಯ ವಿರುದ್ಧ ಕ್ರಮಕೈಗೊಳ್ಳುವಂತೆ ವಂಡ್ಸೆ ಕಂದಾಯ ನಿರೀಕ್ಷಕ ರಾಘವೇಂದ್ರ ಅವರು ಶಂಕರನಾರಾಯಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂದಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಆರೋಪಿಗೆ ನ್ಯಾಯಲಾಯ ಜಾಮೀನು ಮಂಜೂರು ಮಾಡಿದೆ.