Advertisement

ಅರೆಸ್ಟ್‌ ಅಂದ್ರೆ ಅಲರ್ಜಿ ಎನ್‌ಕೌಂಟರ್‌ ಅಂದ್ರೆ ಎನರ್ಜಿ

09:17 AM Apr 16, 2019 | Lakshmi GovindaRaju |

ಶಿವರಾಜಕುಮಾರ್‌ ಅಭಿನಯದ “ರುಸ್ತುಂ’ ಟ್ರೇಲರ್‌ ಬಿಡುಗಡೆಯಾಗಿದೆ. ಮಾಸ್‌ ಅಭಿಮಾನಿಗಳು ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಆ್ಯಕ್ಷನ್‌. ಹೌದು, ಸಿನಿಮಾದ ಟ್ರೇಲರ್‌ ಹೈವೋಲ್ಟೆಜ್‌ ಆ್ಯಕ್ಷನ್‌ನಿಂದ ಕೂಡಿದ್ದು, ಇದೊಂದು ಪಕ್ಕಾ ಆ್ಯಕ್ಷನ್‌ ಸಿನಿಮಾ ಎಂಬುದು ಬಿಂಬಿತವಾಗಿದೆ.

Advertisement

ಚಿತ್ರದಲ್ಲಿ ಖಡಕ್‌ ಡೈಲಾಗ್‌ಗಳು ಚಿತ್ರದ ಬಗೆಗಿನ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿರುವುದಂತೂ ಸುಳ್ಳಲ್ಲ. ಅದರಲ್ಲೂ “ಅರೆಸ್ಟ್‌ ಅಂದ್ರೆ ನನಗೆ ಅಲರ್ಜಿ, ಎನೌಕೌಂಟರ್‌ ಅಂದ್ರೆ ಎನರ್ಜಿ’ ಸೇರಿದಂತೆ ಚಿತ್ರದಲ್ಲಿ ಬರುವ ಡೈಲಾಗ್‌ಗಳು ಮಾಸ್‌ ಪ್ರಿಯರ ಶಿಳ್ಳೆಗೆ ಕಾರಣವಾಗುವುದರಲ್ಲಿ ಎರಡು ಮಾತಿಲ್ಲ.

ಇದರ ಜೊತೆಗೆ ಚಿತ್ರದ ಟ್ರೇಲರ್‌ನಲ್ಲಿ ಭಾವನಾತ್ಮಕ ಅಂಶವನ್ನು ನೀಡಲಾಗಿದೆ. ಈ ಮೂಲಕ ಸಿನಿಮಾದಲ್ಲಿ ಗಂಭೀರವಾದ ವಿಷಯವೊಂದನ್ನು ನಿರ್ದೇಶಕರು ಹೇಳಿದಂತಿದೆ. ಚಿತ್ರದಲ್ಲಿ ಶಿವರಾಜಕುಮಾರ್‌ ಹಿಂದಿ ಸಂಭಾಷಣೆಗಳೂ ಕೂಡಾ ಇದ್ದು, ಈ ಮೂಲಕ ಕಥೆ ಕರ್ನಾಟಕ ದಾಟಿ ಸಾಗಿರುವುದು ಸ್ಪಷ್ಟವಾಗಿದೆ.

ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌ ಕೂಡಾ ಚಿತ್ರದಲ್ಲಿ ನಟಿಸಿದ್ದು, ಅವರ ಆ್ಯಕ್ಷನ್‌ ದೃಶ್ಯಗಳೊಂದಿಗೆ “ರುಸ್ತುಂ’ ಖದರ್‌ ಹೆಚ್ಚಿದೆ. ಈ ಚಿತ್ರವನ್ನು ರವಿವರ್ಮ ನಿರ್ದೇಶಿಸಿದ್ದಾರೆ. ಸಾಹಸ ನಿರ್ದೇಶಕರಾಗಿ ಬೇಡಿಕೆಯಲ್ಲಿರುವ ರವಿವರ್ಮ ನಿರ್ದೇಶನದ ಚೊಚ್ಚಲ ಸಿನಿಮಾ “ರುಸ್ತುಂ’. ಈ ಚಿತ್ರವನ್ನ ಜಯಣ್ಣ-ಭೋಗೇಂದ್ರ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಶ್ರದ್ಧಾ, ಮಯೂರಿ ಕೂಡಾ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next