ಹೊನ್ನಾವರ: ಮಾದಕ ಪದಾರ್ಥ ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ತನ್ನ ಬಳಿ ಇಟ್ಟುಕೊಂಡಿದ್ದ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿ ಇನ್ನಿಬ್ಬರು ಪರಾರಿಯಾದ ಘಟನೆ ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆಟೋ ಚಾಲಕ ಭಟ್ಕಳ ತಾಲೂಕಿನ ಮದೀನಾ ಕಾಲೋನಿ ಮೈದಿನ್ ಸ್ಟ್ರೀಟ್‌ನ ಅಬ್ರಾರ್ ಇಬ್ರಾಹಿಂ ಶೇಖ್ (26) ಬಂಧಿತ ಆರೋಪಿ. ತಾಲೂಕಿನ ಕಾಸರಕೋಡದ ಟೊಂಕಾ ಹತ್ತಿರದ ಕಿಜಾರ್ ಮಸೀದಿ ಬಳಿಯ ನಿವಾಸಿ ಮೊಹಮ್ಮದ್ ಸಲಾಂ ಇಸ್ಮಾಯಿಲ್ ಮೂಸಾ (22) ಹಾಗೂ ಹೊನ್ನಾವರ ತಾಲೂಕಿನ ಟೊಂಕಾ ಕ್ರಾಸ್‌ನ ಸಮೀರ್ ಮಹಮ್ಮದ್ ಅಲಿ ಪಂಡಿತ (23) ಓಡಿ ಪರಾರಿಯಾದ ಆರೋಪಿಗಳಾಗಿದ್ದಾರೆ.
ಮೂವರು ಆರೋಪಿಗಳು ಶುಕ್ರವಾರ ಕಾಸರಕೋಡ, ಟೊಂಕಾದ ಕಿಜಾರ್ ಮಸೀದಿ ಹತ್ತಿರ ಶರಾವತಿ ನದಿ ತೀರದ ಬಳಿ ಒಟ್ಟೂ 500 ಗ್ರಾಂ ತೂಕದ ಸುಮಾರು 10,000 ರೂ. ಮೌಲ್ಯದ 30 ಗಾಂಜಾ ಮಾದಕ ವಸ್ತು ಇರುವ ಪ್ಯಾಕೆಟ್‌ಗಳನ್ನು ಮಾರಾಟ ಮಾಡುವ ಉದ್ದೇಶದಿಂದ ತಮ್ಮ ಬಳಿ ಇಟ್ಟುಕೊಂಡಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಹೊನ್ನಾವರ ಠಾಣೆ ಪೊಲೀಸರು ದಾಳಿ ನಡೆಸಿದಾಗ ಅಬ್ರಾರ್ ಇಬ್ರಾಹಿಂ ಶೇಖ್ ಸೆರೆ ಸಿಕ್ಕಿದ್ದು ಉಳಿದಿಬ್ಬರು ಪರಾರಿಯಾದರು. ಬಂಧಿತನಿಂದ 30 ಗಾಂಜಾ ಪ್ಯಾಕೆಟ್‌ಗಳು, ಒಂದು ತಕ್ಕಡಿ, ಗಾಂಜಾ ಸಾಗಾಟಕ್ಕೆ ಬಳಸಿದ ನೋಂದಣಿ ಸಂಖ್ಯೆ ಇರದ ಸುಮಾರು 25 ಸಾವಿರ ರೂ. ಮೌಲ್ಯದ ಸ್ಕೂಟರ್ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ :ನೆರೂಲ್ ಶ್ರೀ ಬಾಲಾಜಿ ಮಂದಿರ: ಶ್ರೀವರಿ ಬ್ರಹ್ಮೋತ್ಸವಂ ಪ್ರಾರಂಭ
ಪಿಎಸ್‌ಐ ಅಶೋಕ ಕುಮಾರ ಜಿ.ಎಲ್. ಪರಾರಿಯಾದವರ ಪತ್ತೆಗೆ ಬಲೆ ಬೀಸಿದ್ದಾರೆ.