Advertisement

ನಿರಾಶ್ರಿತರ ತಂಗುದಾಣದ ವ್ಯವಸ್ಥೆ: ಡಿಸಿ ಸಭೆ

08:53 AM Apr 17, 2020 | mahesh |

ಉಡುಪಿ: ಜಿಲ್ಲೆಯಲ್ಲಿ ವಲಸೆ, ಕಟ್ಟಡ ಕಾರ್ಮಿಕರಿಗೆ ತಂಗುದಾಣದ ವ್ಯವಸ್ಥೆಯನ್ನು ಮಾಡಿದ್ದು, ಇದರ ನಿರ್ವಹಣೆಯ ಕುರಿತಂತೆ ಗುರುವಾರ ಜಿ.ಪಂ.ನ
ಡಾ| ವಿ.ಎಸ್‌. ಆಚಾರ್ಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

Advertisement

ವಲಸೆ, ಕಟ್ಟಡ ಕಾರ್ಮಿಕರಿಗೆ 15 ಕಡೆ ತಂಗುದಾಣವನ್ನು ತೆರೆದು ಮೂಲ ಆವಶ್ಯಕತೆಯನ್ನು ಕಲ್ಪಿಸಿ ವಸತಿ, ಊಟ, ಉಪಾಹಾರಗಳನ್ನು ನೀಡಲಾಗುತ್ತಿದೆ. ಈ ವ್ಯವಸ್ಥೆಗೆ ದೇವಸ್ಥಾನ, ಸಂಘ – ಸಂಸ್ಥೆಗಳು ಸಹಾಯ ಹಸ್ತ ನೀಡಿದ್ದು ಇವರಿಗೆ ಜಿಲ್ಲಾಧಿಕಾರಿಗಳು ಧನ್ಯವಾದ ತಿಳಿಸಿದರು. ನೆರವು ಅರ್ಹ ವ್ಯಕ್ತಿಗೆ ತಲುಪಬೇಕು. ಅನರ್ಹ ವ್ಯಕ್ತಿಗೆ ನೆರವು ಸಿಗದಂತೆ, ಒಬ್ಬ ವ್ಯಕ್ತಿಗೆ ಹೆಚ್ಚು ಕಿಟ್‌ಗಳು ಸಿಗದಂತೆ ಗಮನಹರಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಸಲಹೆ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಜಿಲ್ಲಾ ವ್ಯಾಪ್ತಿಯ ಕೂಲಿ, ವಲಸೆ ಕಾರ್ಮಿಕರಿಗೆ ಜಿಲ್ಲಾಡಳಿತದಿಂದ ಮಾಡಿದ ವ್ಯವಸ್ಥೆಗೆ ಶ್ಲಾಘನೆ ವ್ಯಕ್ತಪಡಿಸಿ ಇತರ ಜಿಲ್ಲೆಗೆ ಹೋಲಿಸಿದರೆ ಜಿಲ್ಲೆಯಲ್ಲಿ ಅಚ್ಚುಕಟ್ಟಿನ ವ್ಯವಸ್ಥೆ ಮಾಡಲಾಗಿದೆ ಎಂದರು.

ಜಿ.ಪಂ. ಸಿಇಒ, ಅಪರ ಜಿಲ್ಲಾಧಿಕಾರಿ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು, ಕುಂದಾಪುರ ಸಹಾಯಕ ಕಮಿಷನರ್‌ ಹಾಗೂ ತಹಶೀಲ್ದಾರ್‌ಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next