Advertisement
ರವೀಂದ್ರ ವೆಂಶಿ ಈ ಚಿತ್ರದ ನಿರ್ದೇಶಕರು. ತರಂಗ ಸಂತೋಷ್ ಈ ಚಿತ್ರದ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರವಾಗಲು ಕಾರಣ ಕೂಡಾ ತರಂಗ ಸಂತೋಷ್. ಸಂತೋಷ್ ಅವರು ಸುಮಾರು 3 ಸಾವಿರ ಮಠಗಳಿಗೆ ಭೇಟಿ ನೀಡಿ ಅಲ್ಲಿನ ಸ್ವಾಮೀಜಿಗಳನ್ನು ಮಾತನಾಡಿಸಿದ್ದಾರೆ. ಈ ಭೇಟಿ ವೇಳೆ ಅವರಿಗೆ ಸಾಕಷ್ಟು ವಿಭಿನ್ನ ಅನುಭವಗಳಾಗಿವೆ. ಆ ಅನುಭವಗಳನ್ನು ನಿರ್ದೇಶಕ ರವೀಂದ್ರ ವೆಂಶಿ ಅವರಿಗೆ ಹೇಳಿದಾಗ, ಅದನ್ನು ಸಿನಿಮಾ ಮಾಡಲು ಮುಂದಾದರಂತೆ. ಈ ಮೂಲಕ “ಮಠ’ ಸಿನಿಮಾವಾಗಿದೆ. ಎಲ್ಲಾ ಓಕೆ ಚಿತ್ರಕ್ಕೆ “ಮಠ’ ಟೈಟಲ್ ಯಾಕೆ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ನಿರ್ದೇಶಕ ರವೀಂದ್ರ ಅವರು ಹೇಳುವಂತೆ, ಅವರಿಗೆ ಮಠ ಎಂಬ ಟೈಟಲ್ ಇಡುವ, ಯಶಸ್ವಿ ಚಿತ್ರವೊಂದರ ಲಾಭ ಪಡೆಯುವ ಯಾವುದೇ ಉದ್ದೇಶವಿಲ್ಲವಂತೆ. ಆದರೆ, ಕಥೆ ಹಿನ್ನೆಲೆಯನ್ನು ಸೂಚಿಸಲು ಬೇರೆ ಯಾವುದೇ ಶೀರ್ಷಿಕೆ ಸೂಕ್ತವಲ್ಲದ ಕಾರಣ ಕೊನೆಗೆ “ಮಠ’ ಎಂದಿಟ್ಟಿದ್ದಾಗಿ ಹೇಳುತ್ತಾರೆ. ಇಡೀ ಸಿನಿಮಾ ಹಾಸ್ಯದ ಹಿನ್ನೆಲೆಯಲ್ಲಿ ಸಾಗಲಿದ್ದು, ಮಠಗಳ ಕುರಿತಾದ ಸಾಕಷ್ಟು ಅಂಶಗಳನ್ನು ಹೇಳಲಿದ್ದಾರಂತೆ. ಹಾಗಾಗಿ, ಒಳ್ಳೆಯದು, ಕೆಟ್ಟದು ಎರಡೂ ಸಿನಿಮಾದಲ್ಲಿ ಬಂದು ಹೋಗಲಿದೆ ಎನ್ನುವುದು ಅವರ ಮಾತು. 30 ಜಿಲ್ಲೆಗಳಲ್ಲಿ ಚಿತ್ರೀಕರಣ ಮಾಡುವ ಉದ್ದೇಶ ನಿರ್ದೇಶಕರಿಗಿದೆ. ಚಿತ್ರದಲ್ಲಿ ಯಾವುದೇ ಇಮೇಜ್ ಇರದ ಹೊಸ ಕಲಾವಿದರಿಗೆ ಅವಕಾಶ ಕೊಡುವ ಉದ್ದೇಶ ನಿರ್ದೇಶಕರಿಗಿದೆ. ಚಿತ್ರದಲ್ಲಿ ಹಾಡುಗಳ ಜೊತೆ 8 ಜಾನಪದ ಗೀತೆಗಳನ್ನು ಸಂದರ್ಭಕ್ಕೆ ತಕ್ಕಂತೆ ಬಳಸಿಕೊಳ್ಳುವ ಉದ್ದೇಶ ಕೂಡಾ ನಿರ್ದೇಶಕರಿಗಿದೆ.
Advertisement
ಮಠ ತುಂಬಾ ಹೊಸ ಬರ ಆಟ
06:00 AM Nov 16, 2018 | |
Advertisement
Udayavani is now on Telegram. Click here to join our channel and stay updated with the latest news.