Advertisement
ಸೂರ್ಯಕುಮಾರ್ ಯಾದವ್ ಭಾರತದ ವಿಶ್ವಕಪ್ ತಂಡದ ಆಟಗಾರ ನಾಗಿದ್ದರು. ಆದರೆ ಸಾಧಿಸಿದ್ದೇನೂ ಇಲ್ಲ. ಕೂಟದಲ್ಲಿ ಒಂದೇ ಒಂದು ಅರ್ಧ ಶತಕವನ್ನೂ ಬಾರಿಸಲಿಲ್ಲ. ಫೈನಲ್‌ನಲ್ಲಿ ಮಿಂಚುವ ಉತ್ತಮ ಅವಕಾಶ ಇತ್ತಾದರೂ ಇದನ್ನು ವ್ಯರ್ಥ ಗೊಳಿಸಿದರು. ಈ ಎಲ್ಲ ವೈಫಲ್ಯದ ಹೊರತಾಗಿಯೂ ಅವರನ್ನು ಟಿ20 ತಂಡದ ನಾಯಕರನ್ನಾಗಿ ನೇಮಿಸುವ ಅಗತ್ಯ ಏನಿತ್ತು, ಇದರ ಔಚಿತ್ಯವೇನು ಎಂಬುದಾಗಿ ಪ್ರಶ್ನಿಸಿದ್ದಾರೆ.
ಉಪನಾಯಕ್ವ ನೀಡಿದ್ದು ಕೂಡ ಸರಿಯಲ್ಲ ಎಂದು ಚರ್ಚಿಸಲಾಗುತ್ತಿದೆ. ಸೂರ್ಯ ಮತ್ತು ಗಾಯಕ್ವಾಡ್‌ಗಿಂತಲೂ ಸೀನಿಯರ್ ಆಟಗಾರನಾಗಿರುವ ಅಕ್ಷರ್ ಪಟೇಲ್ ತಂಡದಲ್ಲಿರುವಾಗ ಅವರಿಗೆ ನಾಯಕತ್ವದ ಜವಾಬ್ದಾರಿ ವಹಿಸಬೇಕಿತ್ತು ಎಂಬುದು ಬಹುತೇಕ ಮಂದಿಯ ವಾದ. ಕೇರಳದ ಸ್ಟಂಪರ್ ಸಂಜು ಸ್ಯಾಮ್ಸನ್ ಮತ್ತು ಲೆಗ್‌ಸ್ಪಿನ್ನರ್ ಯಜುವೇಂದ್ರ ಚಹಲ್ ಅವರನ್ನು ಕೈಬಿಟ್ಟದ್ದು ಕೂಡ ಭಾರೀ ಟೀಕೆಗೆ ಕಾರಣವಾಗಿದೆ. ಸ್ಯಾಮ್ಸನ್ ಕಳೆದ ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ಪ್ರವಾಸಕ್ಕೆ ಆಯ್ಕೆ ಯಾಗಿದ್ದರು. ಆದರೆ ಆಸೀಸ್ ಎದುರಿನ ಸರಣಿಗೆ ವಿನಾ ಕಾರಣ ಕೈಬಿಟ್ಟದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
Related Articles
ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾ ಗಿದ್ದ ಭಾರತ ಈ ಅವಕಾಶವನ್ನು ಕಳೆದುಕೊಂಡು ಧರೆಗೆ ಕುಸಿದಿದೆ. ಬೆನ್ನಲ್ಲೇ ಆಸ್ಟ್ರೇಲಿಯ ಎದುರಿನ ಟಿ20 ಸರಣಿಯ ಕ್ಷಣಗಣನೆ ಆರಂಭವಾಗಿದೆ. ಇಲ್ಲಿ ಗೆದ್ದರೂ ಅದೇನೂ ಸೇಡಿಗೆ ಸಮನಾಗಲಾರದು. ಏಕೆಂದರೆ ವಿಶ್ವಕಪ್‌ಗೆ ಇನ್ನೊಂದು ವಿಶ್ವಕಪ್ ಮಾತ್ರವೇ ಸಾಟಿ. ಆದರೆ ಆಸ್ಟ್ರೇಲಿಯ ವಿರುದ್ಧ ಇನ್ನೊಂದು ಮುಖಭಂಗವನ್ನು ಅನುಭವಿಸುವ ಸ್ಥಿತಿಯಲ್ಲಿ ಭಾರತದ ಕ್ರಿಕೆಟ್ ಅಭಿಮಾನಿ ಗಳಿಲ್ಲ. ಇದನ್ನು ಸಹಿಸಲಿಕ್ಕೂ ಆಗದು. ಇದನ್ನು ಆಯ್ಕೆ ಸಮಿತಿ ಅರಿತು ತುಸು ಬಲಿಷ್ಠ ತಂಡವನ್ನೇ ಆರಿಸಬೇಕಿತ್ತು ಎಂಬ ವಾದದಲ್ಲಿ ಹುರುಳಿಲ್ಲದಿಲ್ಲ.
ಶ್ರೇಯಸ್ ಅಯ್ಯರ್ ಕೊನೆಯ 2 ಪಂದ್ಯಗಳಿಗೆ ಲಭ್ಯರಿರುತ್ತಾರೆ. ಅದೂ ಉಪನಾಯಕರಾಗಿ. ಅಂದರೆ ಸೂರ್ಯ ಕುಮಾರ್ ಅವರ “ಡೆಪ್ಯುಟಿ’. ಇದೆಲ್ಲಿಯ ನ್ಯಾಯ ಎಂಬುದು ಎಲ್ಲರ ಪ್ರಶ್ನೆ. ಸಾಮಾನ್ಯ ತಂಡದ ವಿರುದ್ಧವಾದರೆ ಇಂಥ ಆಯ್ಕೆ, ಇಂಥ ಪ್ರಯೋಗ ಓಕೆ. ಆದರೆ ವಿಶ್ವಕಪ್ ಗೆದ್ದ ಹುರುಪಿನಲ್ಲಿರುವ ಆಸ್ಟ್ರೇಲಿಯದಂಥ ಕ್ಲಾಸ್ ತಂಡದ ವಿರುದ್ಧ ಇಂಥ ಪ್ರಯೋಗ ದೊಡ್ಡ ಬ್ಲಿಂಡರ್ ಆಗುವ ಅಪಾಯವಿದೆ.
Advertisement
ಭಾರತಕ್ಕಿಂತ ಬಲಿಷ್ಠಆಸ್ಟ್ರೇಲಿಯ ತಂಡ ಭಾರತಕ್ಕಿಂತಲೂ ಹೆಚ್ಚು ಬಲಿಷ್ಠವಾಗಿ ಗೋಚರಿಸುತ್ತಿದೆ. ಭಾರತ ತಂಡಕ್ಕಿಂತ ಹೆಚ್ಚಿನ ಅನುಭವಿ ಹಾಗೂ ಅಪಾಯಕಾರಿ ಆಟಗಾರರನ್ನು ಇದು ಹೊಂದಿದೆ. ಮ್ಯಾಥ್ಯೂ ವೇಡ್ ನೇತೃತ್ವದ ಈ ತಂಡದಲ್ಲಿ ಅರ್ಧ ಡಜನ್‌ಗಿಂತಲೂ ಹೆಚ್ಚಿನ ವಿಶ್ವಕಪ್ ಹೀರೋಗಳಿದ್ದಾರೆ. ಟ್ರ್ಯಾವಿಸ್ ಹೆಡ್, ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋಯಿ ನಿಸ್, ಸ್ಟೀವನ್ ಸ್ಮಿತ್, ಜೋಶ್ ಇಂಗ್ಲಿಸ್, ಸೀನ್ ಅಬೋಟ್, ಆ್ಯಡಂ ಝಂಪ ಮೊದಲಾದವರು ಇನ್ನೊಂದು ಸುತ್ತಿನ ಹೋರಾಟಕ್ಕೆ ಅಣಿಯಾಗಿದ್ದಾರೆ. ಭಾರತ ತಂಡದಲ್ಲಿರುವ ವಿಶ್ವಕಪ್ ಆಟಗಾರರ ಸಂಖ್ಯೆ ಕೇವಲ ಮೂರು. ಇದರಲ್ಲಿ ಯಶಸ್ಸು ಕಂಡವರು ಯಾರೂ ಇಲ್ಲ. ಇದೊಂಥರ ಐಪಿಎಲ್ ಟೀಮ್‌ನಂತಿದೆ. ಆಸ್ಟ್ರೇಲಿಯದ ಎದುರು ಈ ಯುವ ಪಡೆ ಸಿಡಿದು ನಿಂತೀತೇ? ಪ್ರಶ್ನೆ ಸಹಜ. ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮ, ರಿಂಕು ಸಿಂಗ್, ಜಿತೇಶ್ ಶರ್ಮ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯಿ, ಆರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಆವೇಶ್ ಖಾನ್, ಮುಕೇಶ್ ಕುಮಾರ್. ಆಸ್ಟ್ರೇಲಿಯ ತಂಡ: ಮ್ಯಾಥ್ಯೂ ವೇಡ್ (ನಾಯಕ), ಆರನ್ ಹಾರ್ಡಿ, ಜೇಸನ್ ಬೆಹೆÅಂಡಾಫ್ì, ಸೀನ್ ಅಬೋಟ್, ಟಿಮ್ ಡೇವಿಡ್, ನಥನ್ ಎಲ್ಲಿಸ್, ಟ್ರ್ಯಾವಿಸ್ ಹೆಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ತನ್ವೀರ್ ಸಂಘಾ, ಮ್ಯಾಟ್ ಶಾರ್ಟ್, ಸ್ಟೀವನ್ ಸ್ಮಿತ್, ಮಾರ್ಕಸ್ ಸ್ಟೋಯಿನಿಸ್, ಕೇನ್ ರಿಚರ್ಡ್‌ಸನ್, ಆ್ಯಡಂ ಝಂಪ.