Advertisement

ಕಾಶ್ಮೀರ ಕಣಿವೆಯಲ್ಲಿ 450 ಪಾಕ್‌ ಬೆಂಬಲಿತ ಉಗ್ರರು: ಸೇನೆ ಎಚ್ಚರಿಕೆ

06:29 AM Feb 08, 2019 | udayavani editorial |

ಜಮ್ಮು : ಕಾಶ್ಮೀರ ಕಣಿವೆಯಲ್ಲಿ ಸುಮಾರು 450 ಪಾಕ್‌ ಬೆಂಬಲಿತ ಉಗ್ರರು ಕಾರ್ಯವೆಸಗುತ್ತಿದ್ದಾರೆ; ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ  ಎಲ್‌ಓಸಿ ಉದ್ದಕ್ಕೂ ಸುಮಾರು 16 ಉಗ್ರ ಶಿಬಿರಗಳು ಈಗಲೂ ಕ್ರಿಯಾಶೀಲವಾಗಿವೆ ಎಂದು ಭಾರತೀಯ ಸೇನೆ ಎಚ್ಚರಿಸಿದೆ.

Advertisement

ಉತ್ತರದ ಪೀರ್‌ ಪಂಜಾಲ್‌ ನಲ್ಲಿ ಅಧಿಕ ಸಂಖ್ಯೆಯ ಪಾಕ್‌ ಬೆಂಬಲಿತ ಉಗ್ರರು ಸಕ್ರಿಯರಾಗಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ 350ರಿಂದ 400 ಪಾಕ್‌ ಉಗ್ರರು ಸಕ್ರಿಯರಾಗಿದ್ದಾರೆ. ಪೀರ್‌ ಪಂಜಾಲ್‌ ನ ದಕ್ಷಿಣಕ್ಕೆ 50 ಉಗ್ರರು ಕ್ರಿಯಾಶೀಲರಾಗಿದ್ದಾರೆ ಎಂದು ನಾರ್ದರ್ನ್ ಆರ್ಮಿ ಕಮಾಂಡರ್‌ ಲೆಫ್ಟಿನೆಂಟ್‌ ಜನರಲ್‌ ರಣಬೀರ್‌ ಸಿಂಗ್‌ ಅವರು ಉಧಾಂಪುರದಲ್ಲಿ ಸುದ್ದಿಗಾರರಿಗೆ ತಿಳಿಸಿದರು. 

ಪೀರ್‌ಪಂಜಾಲ್‌ ನ ದಕ್ಷಿಣಕ್ಕಿರುವ ಉಗ್ರರೆಲ್ಲ ಈಗ ಯಾವುದೇ ಚಟುವಟಿಕೆ ನಡೆಸದೆ ಸುಮ್ಮಗಿದ್ದಾರೆ ಎಂದವರು ಹೇಳಿದರು.  

Advertisement

Udayavani is now on Telegram. Click here to join our channel and stay updated with the latest news.

Next