ಚಿಕ್ಕಬಳ್ಳಾಪುರ: ನೀವು ಯಾವ ಸ್ಥಳದ ಲ್ಲಿದ್ದೀರಿ? ನೀವು ಕೋವಿಡ್-19 ಸೋಂಕಿತ ವ್ಯಕ್ತಿಯ ಆರು ಅಡಿ ಅಂತರದಲ್ಲಿ ದ್ದೀರಾ? ನೀವು ಸೋಂಕಿತರಿಗೆ ಹತ್ತಿರದಲ್ಲಿದ್ದು, ತೀರಾ ಹೈ ರಿಸ್ಕ್ ಪ್ರದೇಶದಲ್ಲಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಸಾರ್ವಜನಿಕರಿಗೆ ಎಚ್ಚರಿಸುವ ಆರೋಗ್ಯ ಸೇತು ಆ್ಯಪ್ ಬಳಕೆ ಬಗ್ಗೆ ಜಿಲ್ಲೆಯ ಜನರಿಗೆ ಅರಿವು ಇಲ್ಲದೇ ಕಡ್ಡಾಯವಾಗಿ ಬಳಕೆ ಮಾಡಬೇಕೆಂದು ಸರ್ಕಾರದ ಆದೇಶ ಹಳ್ಳ ಹಿಡಿಯುವಂತಾಗಿದೆ. ‘ಆರೋಗ್ಯ ಸೇತು’ ಹೆಸರಿನ ಈ ಮೊಬೈಲ್ ಅಪ್ಲಿಕೇಶನ್ ಸಹಾಯದಿಂದ ಸ್ಮಾರ್ಟ್ ಫೋನ್ ಬಳಕೆದಾರರು ತಮ್ಮ ವ್ಯಾಪ್ತಿ ಯಲ್ಲಿ ರುವ ಕೋವಿಡ್ -19 ಸೋಂಕಿತರ ಮಾಹಿತಿ ಪಡೆದುಕೊಳ್ಳಲು ಸಾಧ್ಯವಾಗಲಿದೆ.
ಜಾಗೃತಿ ಕೊರತೆ: ಕಡ್ಡಾಯವಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಎಲ್ಲಾ ಸರ್ಕಾರಿ ಅಧಿಕಾರಿಗಳು ಹಾಗೂ ಸಾರ್ವಜನಿ ಕರು ಮೊಬೈಲ್‌ನಲ್ಲಿ ಆರೋಗ್ಯ ಸೇತು ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳಬೇಕೆಂಬುದು ಸರ್ಕಾರ ಆದೇ ಶಿಸಿದೆ. ಆದರೆ ಇದರ ಬಗ್ಗೆ ಸಮರ್ಪಕವಾಗಿ ಸಾರ್ವಜನಿಕ ವಲಯದಲ್ಲಿ ಅರಿವು ಮೂಡಿಸಬೇಕಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ಆಶಾ ಕಾರ್ಯಕರ್ತೆ ಯರ ಮೇಲೆ ಜವಾಬ್ದಾರಿ ವಹಿಸಿ ಕೈ ತೊಳೆದುಕೊಂಡಿದ್ದಾರೆ.
ಆ್ಯಪ್ ಬಳಕೆದಾರರು ಒಂದು ವೇಳೆ ಹೈ ರಿಸ್ಕ್ನಲ್ಲಿದ್ದರೆ ಅಥವಾ ನೀವು ಹೈ ರಿಸ್ಕ್ ಪ್ರದೇಶದಲ್ಲಿದ್ದರೆ ಈ ಆ್ಯಪ್ ನಿಮಗೆ ಸೋಂಕು ಪತ್ತೆ ಪರೀಕ್ಷೆಗೆ ಹೋಗುವಂತೆ ಹಾಗೂ ಟೋಲ್ – ಫ್ರೀ- ಸಂಖ್ಯೆ 1075ಕ್ಕೆ ಕರೆ ಮಾಡು ವಂತೆ ಸೂಚಿಸುತ್ತದೆ. ಜೊತೆಗೆ ಕೋವಿಡ್ 19 ವೈರಸ್ ಸೋಂಕಿಗೆ ಒಳಗಾಗು ವುದರಿಂ ದ ನೀವು ಹೇಗೆ ದೂರವಿರಬಹುದು ಎಂಬ ವಿಚಾರದಲ್ಲಿ ಆರೋಗ್ಯ ಸೇತು ಕೆಲವೊಂದು ಸಲಹೆ ಸಹ ನೀಡುತ್ತದೆ. ಜಿಲ್ಲೆಯಲ್ಲಿ ಇದುವರೆಗೂ ಕೊನಾರ ಸೋಂಕಿ ತರ ಸಂಕ್ಯೆ 126 ದಾಟಿದೆ. ಇನ್ನೂ ಸೋಂಕಿತರು ಹೆಚ್ಚಾಗುವ ಆತಂಕ ಎದುರಾ ಗಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸೋಂಕಿನ ಬಗ್ಗೆ ಮುನ್ನೆಚ್ಚರಿಕೆ ನೀಡುವ ಆ್ಯಪ್ ಬಳಸುವಂತೆ ಸಾರ್ವಜನಿಕರಲ್ಲಿ ಇಲಾಖೆ ಅರಿವು ಮೂಡಿಸುತ್ತಿಲ್ಲ.
ಇಲಾಖೆ ಬಳಿ ಮಾಹಿತಿಯೆ ಇಲ್ಲ: ಆರೋಗ್ಯ ಸೇತು ಆ್ಯಪ್ ಬಳಕೆ ಬಗ್ಗೆ ರಾಜ್ಯ ಮಟ್ಟ ದಲ್ಲಿ ಸಾಕಷ್ಟು ಅರಿವು, ಪ್ರಚಾರ ನಡೆ ಯುತ್ತಿದ್ದರೂ ಜಿಲ್ಲಾ ಮಟ್ಟದಲ್ಲಿ ಆರೋಗ್ಯ ಇಲಾಖೆ ಆರೋಗ್ಯ ಸೇತು ಆ್ಯಪ್ ಬಗ್ಗೆ ಸಾರ್ವಜನಿಕರಲ್ಲಿ ಸಮರ್ಪಕವಾಗಿ ಅರಿವು ಮೂಡಿಸುತ್ತಿಲ್ಲ. ಜಿಲ್ಲೆಯಲ್ಲಿ ಆ್ಯಪ್‌ನ್ನು ಎಷ್ಟು ಮಂದಿ ಡೌನ್ ಲೋಡ್ ಮಾಡಿ ಬಳಕೆ ಮಾಡುತ್ತಿದ್ದಾರೆಂಬುದರ ಬಗ್ಗೆ ಆರೋಗ್ಯ ಇಲಾಖೆ ಬಳಿ ಮಾಹಿತಿಯೇ ಇಲ್ಲದಿರುವುದು ಕಂಡು ಬಂತು. ಇನ್ನೂ ಮುಂದೆಯಾದರೂ ಜಿಲ್ಲಾಡಳಿತ, ತಾಲೂಕು ಆಡಳಿತಗಳಿಗೆ ಈ ನಿಟ್ಟಿನಲ್ಲಿ ಸೂಕ್ತ ಮಾರ್ಗದರ್ಶನ ನೀಡಿ ಆ್ಯಪ್ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಬೇಕಿದೆ.
ಆರೋಗ್ಯ ಸೇತು ಆ್ಯಪ್‌ನ್ನು ಜಿಲ್ಲೆಯಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಡೌನ್‌ಲೋಡ್ ಮಾಡಿಕೊಂಡಿಲ್ಲ. ಎಷ್ಟು ಜನ ಡೌನ್‌ಲೋಡ್ ಮಾಡಿಕೊಂಡಿದ್ದಾರೆಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲ. ಆದರೆ ಕಡ್ಡಾಯವಾಗಿ ನಮ್ಮ ಇಲಾಖೆಯ ಅಧಿಕಾರಿಗಳು ಡೌನ್‌ಲೋಡ್ ಮಾಡಿಕೊಳ್ಳಬೇಕೆಂದು ಸೂಚಿಸಿದ್ದೇವೆ. ಸಾರ್ವಜನಿಕರಲ್ಲಿಯು ಈ ಬಗ್ಗೆ ಆಶಾ ಕಾರ್ಯಕರ್ತೆಯರ ಮೂಲಕ ಅರಿವು ಮೂಡಿಸುತ್ತಿದ್ದೇವೆ.
-ಡಾ.ಯೋಗೇಶ್‌ಗೌಡ, ಜಿಲ್ಲಾ ಆರೋಗ್ಯಾಧಿಕಾರಿ
* ಕಾಗತಿ ನಾಗರಾಜಪ್ಪ