ಚನ್ನರಾಯಪಟ್ಟಣ: ಕಾಂಗ್ರೆಸ್‌ನಿಂದ ತಾಲೂಕಿನ 34 ಗ್ರಾಪಂ ವ್ಯಾಪ್ತಿಯಲ್ಲಿ ಆರೋಗ್ಯ ಹಸ್ತಕ್ಕೆ ಚಾಲನೆ ನೀಡಿದ್ದು, ಕೋವಿಡ್ ವಾರಿಯರ್ಸ್ ಕಾರ್ಯ ಪ್ರವೃತ್ತರಾಗಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಎಂ.ರಾಮಚಂದ್ರ ತಿಳಿಸಿದರು.
ತಾಲೂಕಿನ ಶ್ರವಣಬೆಳಗೊಳದಲ್ಲಿ ನಡೆದ ಆರೋಗ್ಯ ಹಸ್ತ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಿಸುವಲ್ಲಿವಿಫಲವಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸರ್ಕಾರ ಹೆಚ್ಚು ಜಾಗೃತಿ ವಹಿಸದೆ ಇರುವುದರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿ. ನೇತೃತ್ವದಲ್ಲಿ ಆರೋಗ್ಯ ಹಸ್ತದ ಮೂಲಕ ರಾಜ್ಯ ವ್ಯಾಪ್ತಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್‌ನಿಂದ ಕೋವಿಡ್ ನಾ ವಾರಿಯರ್ಸ್ ಗೆ ಎರಡು ಲಕ್ಷ ರೂ. ವಿಮೆ ಮಾಡಿಸಲಾಗಿದೆ. ಪ್ರತಿ ಗ್ರಾಪಂಗೆ ಇಬ್ಬರು ಹಾಗೂ ನಗರ ವ್ಯಾಪ್ತಿಯಲ್ಲಿ ಹತ್ತು ಮಂದಿ ಕೋವಿಡ್ ವಾರಿಯರ್ ಸೃಷ್ಟಿ ಮಾಡಲಾಗಿದೆ. ತಾಲೂಕಿನ ಮುಖಂಡರ ಸಹಯೋಗದೊಂದಿಗೆ ತಾಲೂಕಿನ ಎಲ್ಲಾ ಹೋಬಳಿ ಕೇಂದ್ರದಲ್ಲಿ ಚಾಲನೆ ನೀಡಲಾಗಿದ್ದು, ನಿರಂತರವಾಗಿ ನಡೆಯಲಿದೆ ಎಂದು ಹೇಳಿದರು. ಬಡವರಿಗೆ ಹಾಗೂ ರೈತರಿಗೆ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಲಾಗುವುದು, ದೇಹದ ತಾಪಮಾನ ತಪಾಸಣೆ ಮಾಡುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ತಿಳಿಸುವುದರೊಂದಿಗೆ, ಸಾಮಾಜಿಕ ಅಂತರದ ಬಗ್ಗೆಯೂ ಮಾಹಿತಿ ನೀಡಲಾಗುವುದು, ಪಕ್ಷದಿಂದ ಸೃಷ್ಟಿಯಾಗಿರುವ ಕೋವಿಡ್ ವಾರಿಯರ್ ಸಾಮಾಜಿಕವಾಗಿ ಕಾರ್ಯಪ್ರವೃತ್ತರಾಗಿ ಸೇವೆ ನೀಡಲಿದ್ದಾರೆ. ಇದಕ್ಕಾಗಿ ಪಕ್ಷದಿಂದ ಕೊರೊನಾ ತಪಾಸಣಾ ಕಿಟ್‌ಗಳನ್ನು ವಾರಿಯರ್ಗೆ ನೀಡಲಾಗಿದೆ ಎಂದು ತಿಳಿಸಿದರು.
ಎಂಎಲ್ಸಿ ಗೋಪಾಲಸ್ವಾಮಿ ಮಾತನಾಡಿ, ಪಕ್ಷದಿಂದ ಕೋವಿಡ್ ವಾರಿಯರ್ಗೆ ಈಗಾಗಲೇ ಸಂಸದ ಡಿ.ಕೆ.ಸುರೇಶ್ ನೇತೃತ್ವದಲ್ಲಿ ಅನುಭವಿ ವೈದ್ಯರಿಂದ ತರಬೇತಿ ನೀಡಲಾಗಿದೆ. ಅವರುಗಳ ಮೂಲಕ ಸಾರ್ವಜನಿಕಪ್ರದೇಶಗಳಲ್ಲಿ ದೇಹದ ತಾಪಮಾನ ಪರೀಕ್ಷೆ ಮಾಡಿ, ಕೋವಿಡ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ, ಇನ್ನು ಮಾರುಕಟ್ಟೆ, ಸಂತೆ ಹಾಗೂ ಅಂಗಡಿ ಮಾಲಿಕರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದರು.
ತಾಲೂಕಿನ ಜುಟ್ಟನಹಳ್ಳಿ, ಗೌಡಗೆರೆ, ಕಲ್ಕೆರೆ, ಬಾಗೂರು, ಅಕ್ಕನಹಳ್ಳಿಕೂಡು, ದಿಡಗ ಹಾಗೂ ಪಟ್ಟಣದ ಗೌಸಿಂಗ್ ಬೋರ್ಡ್‌ನಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮ ನಡೆಯಿತು, ಮಾಜಿ ಶಾಸಕ ಪುಟ್ಟೇಗೌಡ, ಎಂ.ಶಂಕರ್, ಕಮಲಾಕ್ಷಿ, ಸಂಜಯ್‌ಗೌಡ, ದೀಪು ಮೊದಲಾದವರು ಉಪಸ್ಥಿತರಿದ್ದರು