Advertisement

ಕೋವಿಡ್ 19 ಸೋಂಕಿತರ ಮಾಹಿತಿ ನೀಡುತ್ತೆ “ಆರೋಗ್ಯ ಸೇತು’ಆ್ಯಪ್‌

10:04 AM Apr 13, 2020 | Suhan S |

ಹುಬ್ಬಳ್ಳಿ : ಕೋವಿಡ್ 19 ಸೋಂಕಿತರ ಬಗ್ಗೆ ಹಾಗೂ ಮುಂಜಾಗ್ರತಾ ಮಾಹಿತಿ ನೀಡಿಕೆಯ “ಆರೋಗ್ಯ ಸೇತು ‘ಆ್ಯಪ್‌ನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದ್ದು, ರೈಲ್ವೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಇದರ ಬಳಕೆಗೆ ಮುಂದಾಗಬೇಕೆಂದು ನೈರುತ್ಯ ರೈಲ್ವೆ ವಲಯ ತಿಳಿಸಿದೆ.

Advertisement

ಈ ಆ್ಯಪ್‌ ಮೊಬೈಲ್‌ ಟ್ರ್ಯಾಕರ್‌ ಮೂಲಕ ಕೋವಿಡ್ 19  ಸೋಂಕಿಂತರು, ಕ್ವಾರೆಟೈನ್‌ನಲ್ಲಿರುವವರು ಅಕ್ಕಪಕ್ಕ -ಹತ್ತಿರದಲ್ಲಿದ್ದರೆ ಆ ಕುರಿತು ನಿಮ್ಮನ್ನು ಎಚ್ಚರಿಸುವ ಕೆಲಸ ಮಾಡುತ್ತದೆ. ಅಲ್ಲದೆ ಆ್ಯಪ್‌ ಬಳಕೆದಾರರಿಗೆ ರೋಗ ಲಕ್ಷಣ ಅರ್ಥ ಮಾಡಿಕೊಳ್ಳಲು ಮತ್ತು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಸಹಾಯ ಮಾಡುತ್ತದೆ. ಕೇಂದ್ರ ಆರೋಗ್ಯ ಕುಟುಂಬ ಕಲ್ಯಾಣ ಸಚಿವಾಲಯ ಆ್ಯಪ್‌ ಮೂಲಕ ಅಪ್‌ ಡೇಟ್‌ ಮಾಹಿತಿ ನೀಡುವ ಕೆಲಸ ಮಾಡುತ್ತದೆ.

ಆ್ಯಪ್‌ ಬಳಕೆ ಮಾರ್ಗದರ್ಶಿ: ಆರೋಗ್ಯ ಸೇತು ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿದ ನಂತರ ನೀವು ನಿಮ್ಮ ಭಾಷೆ ಆಯ್ಕೆ ಮಾಡಿಕೊಳ್ಳಬೇಕು ಮತ್ತು ನಿಮ್ಮ ಮೊಬೈಲ್‌ ಸಂಖ್ಯೆ ನಮೂದಿಸಿ ನೋಂದಣಿ ಪ್ರಕ್ರಿಯೆಗೆ ಒಳಗಾಗಬೇಕಾಗುತ್ತದೆ. ಹೆಸರು, ವಯಸ್ಸು ಮತ್ತು ಲಿಂಗದ ವಿವರಗಳನ್ನು ಸಲ್ಲಿಸುವ ಅಗತ್ಯವಿರುವ ವಿಭಾಗವನ್ನು ನೀವು ಬಿಟ್ಟುಬಿಡಬಹುದು. ನಿಮ್ಮ ಡೇಟಾವನ್ನು ಕೇಂದ್ರ ಸರಕಾರದೊಂದಿಗೆ ಮಾತ್ರ ಹಂಚಿಕೊಳ್ಳಲಾಗುತ್ತದೆ. ಯಾವುದೇ ಸಮಯದಲ್ಲಿ ನಿಮ್ಮ ಹೆಸರು ಮತ್ತು ಮೊಬೈಲ್‌ ಸಂಖ್ಯೆಯನ್ನು ಈ ಅಪ್ಲಿಕೇಶನ್‌ ಸಾರ್ವಜನಿಕರಿಗೆ ಬಹಿರಂಗಪಡಿಸುವುದಿಲ್ಲ. ಅಪ್ಲಿಕೇಶನ್‌ದಲ್ಲಿ ತೋರಿಸುವ ಬಣ್ಣಗಳಾದ ಹಸಿರ (ಸುರಕ್ಷಿತ), ಹಳದಿ (ಹೆಚ್ಚಿನ ಅಪಾಯ) ಎಂಬ ಸಂಕೇತದ್ದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next