ಮಂಗಳೂರು: ಸ್ಥಗಿತಗೊ ಳ್ಳುವ ಭೀತಿಯಲ್ಲಿದ್ದ ಕರಾವಳಿಯ 3 ಜಿಲ್ಲೆಗಳಲ್ಲಿ ಹಿಂದುಳಿದ ವರ್ಗಗಳ ಯುವಕರಿಗೆ ಸೇನಾ ಆಯ್ಕೆ ಪೂರ್ವತರಬೇತಿ ಶಾಲೆಗಳು ಮತ್ತೆ ಆರಂಭವಾ ಗುವ ಲಕ್ಷಣ ಗೋಚರಿಸಿದೆ.
2 ಬ್ಯಾಚ್ ತರಬೇತಿಯ ಬಳಿಕ ಸಿಬಂದಿಯ ವೇತನ ನೀಡದಿರುವುದು ಹಾಗೂ ಹೊಸ ಬ್ಯಾಚ್ ಆಯ್ಕೆ ಮಾಡಲು ಆಸಕ್ತಿ ತೋರದಿರುವುದು ಹಾಗೂ ಈ ಕುರಿತ ಅನುದಾನ ಒದಗಿಸಲು ಹಣಕಾಸು ಇಲಾಖೆ ಹಿಂಜರಿದಿರುವ ಹಿನ್ನೆಲೆ ಯಲ್ಲಿ ಶಾಲೆಗಳು ಮುಚ್ಚುವ ಭೀತಿಎದುರಿಸುತ್ತಿದ್ದವು. ಈ ಕುರಿತು ಉದಯವಾಣಿ ವರದಿ ಮಾಡಿತ್ತು. ಇದೀಗ ಹಿಂದುಳಿದ ವರ್ಗಗಳ ಇಲಾಖೆಯು ಹಣಕಾಸು ಇಲಾಖೆಯಿಂದ ಅನುಮೋದನೆ ಸಿಗುವ ನಿರೀಕ್ಷೆಯೊಂದಿಗೆ ಯುವಕ ರಿಂದ ಅರ್ಜಿ ಆಹ್ವಾನಿಸಿದೆ.
ಅಭ್ಯರ್ಥಿ ಮತ್ತು ಕುಟುಂಬದ ಒಟ್ಟು ಗರಿಷ್ಠ ವಾರ್ಷಿಕ ಆದಾಯ ಮಿತಿ-(ಪ್ರವರ್ಗ-1)ಕ್ಕೆ 2.50 ಲಕ್ಷ ರೂ.ಗಳು ಹಾಗೂ ಪ್ರವರ್ಗ-2(ಎ), 3(ಎ) ಮತ್ತು 3(ಬಿ) ಗಳಿಗೆ 1 ಲಕ್ಷ ರೂ. 10ನೇ ತರಗತಿ ಉತ್ತೀರ್ಣರಾಗಿದ್ದು, ಪ್ರತೀ ವಿಷಯದಲ್ಲಿ ಕನಿಷ್ಠ 33 ಅಂಕಗಳನ್ನು ಪಡೆದಿರ ಬೇಕು. ಗ್ರೇಡಿಂಗ್ ಸಿಸ್ಟಂ ಇದ್ದಲ್ಲಿ ಮೇಲ್ಕಂಡಂತೆ ಸಮಾನವಾದ ಗ್ರೇಡ್ ಪಡೆದಿರಬೇಕು. ಜನ್ಮ ದಿನಾಂಕ ಮತ್ತು ವಯಸ್ಸು (10ನೇ ತರಗತಿಯ ಅಂಕ ಪಟ್ಟಿಯಲ್ಲಿರುವಂತೆ) 2023 ಡಿಸೆಂಬರ್ 31ಕ್ಕೆ ಅನ್ವಯಿಸುವಂತೆ ಪರಿಗಣಿಸಲಾಗುವುದು.ಅಭ್ಯರ್ಥಿಯ ಎತ್ತರ 166 ಸೆಂ.ಮೀ., ತೂಕ ಕನಿಷ್ಠ 50 ಕೆ.ಜಿ., ಎದೆಯ ಸುತ್ತಳತೆ 77 ಸೆಂ.ಮೀ. ಹೊಂದಿರಬೇಕು.
ದಕ್ಷಿಣ ಕನ್ನಡ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ತರಬೇತಿ ನೀಡಲಾಗುವುದು.
ಅರ್ಜಿಯನ್ನು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಆನೆಗುಂಡಿ ರಸ್ತೆ, ಬಿಜೈ ಕಾಪಿಕಾಡ್, ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ-575004 ವಿಳಾಸಕ್ಕೆ ಖುದ್ದಾಗಿ ಅಥವಾ ನೋಂದಾಯಿತ ಅಂಚೆ ಮೂಲಕ ಸೆಪ್ಟಂಬರ್ 15ರ ಬೆಳಗ್ಗೆ 10ರಿಂದ ಸಂಜೆ 5.30 ರೊಳಗೆ ಸಲ್ಲಿಸ ಬಹುದಾಗಿದೆ. ಅರ್ಜಿ ನಮೂನೆಗೆ
https://bcwd.karnataka.gov.in ನೋಡುವಂತೆ ತಿಳಿಸಲಾಗಿದೆ.