Advertisement

Chamarajanagar ಸೇನಾ ತರಬೇತಿ ವಿಮಾನ ಪತನ: ಪ್ಯಾರಾಚೂಟ್ ಸಹಾಯದಿಂದ ಜಿಗಿದ ಪೈಲಟ್ ಗಳು

01:51 PM Jun 01, 2023 | Team Udayavani |

ಚಾಮರಾಜನಗರ: ಇಲ್ಲಿನ ಭೋಗಾಪುರ ಗ್ರಾಮದಲ್ಲಿ ನಡೆದ ಲಘು ವಿಮಾನ ದುರಂತದಲ್ಲಿ ಗಾಯಗೊಂಡ ಇಬ್ಬರು ಪೈಲಟ್ ಗಳನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದೆ. ಘಟನಾ ಸ್ಥಳಕ್ಕೆ ಬಂದ ವಾಯುಸೇನೆ ಹೆಲಿಕಾಪ್ಟರ್ ನಲ್ಲಿ ಇಬ್ಬರನ್ನೂ ಕರೆದುಕೊಂಡು ಹೋಗಲಾಗಿದೆ.

Advertisement

ವಿಮಾನದಲ್ಲಿದ್ದ ತರಬೇತುದಾರ ವಿಂಗ್ ಕಮಾಂಡರ್ ತೇಜಪಾಲ್ (50 ವ) ಮತ್ತು ತರಬೇತಿ ಪಡೆಯುತ್ತಿದ್ದ ಭೂಮಿಕಾ (28) ಅವರು ಪತನದ ವೇಳೆ ಪ್ಯಾರಚೂಟ್ ಮೂಲಕ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.

ವಿಂಗ್ ಕಮಾಂಡರ್ ತೇಜಪಾಲ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಎಎಸ್‌ಪಿ ಉದೇಶ ‘ಉದಯವಾಣಿ’ಗೆ ತಿಳಿಸಿದರು. ಬೆಂಗಳೂರಿನಿಂದ ಬಂದ ವಾಯುಪಡೆ ಹೆಲಿಕಾಪ್ಟರ್ ಇಬ್ಬರನ್ನು ಕರೆದುಕೊಂಡು ಹೋಗಿದೆ.

ಭಾರತೀಯ ವಾಯು ಸೇನೆಯ ತರಬೇತಿ ವಿಮಾನವು ಇಂದು ಮಧ್ಯಾಹ್ನ 12 ಗಂಟೆಯ ವೇಳೆ ಭೋಗಾಪುರ ಗ್ರಾಮದ ಬಳಿ ಪತನವಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next