Advertisement

ಯುದ್ಧಕ್ಕೆ ಸಿದ್ಧ-ದೇಶದ ಸಂವಿಧಾನ ನಮಗೆ ಮಾರ್ಗದರ್ಶನ ನೀಡಬೇಕು: ಆರ್ಮಿ ಜನರಲ್ ನರಾವಣೆ

10:02 AM Jan 12, 2020 | Nagendra Trasi |

ನವದೆಹಲಿ: ಭಾರತೀಯ ಸೇನಾಪಡೆ ದೇಶದ ಸಂವಿಧಾನಬದ್ಧ ಒಟ್ಟು ಮೌಲ್ಯಗಳ ತಳಪಾಯದ ಮೇಲೆ ಪ್ರಮಾಣವಚನ ಸ್ವೀಕರಿಸಿದೆ. ಭಾರತ ಜಾತ್ಯತೀತ, ಸಂವಿಧಾನಬದ್ಧವಾದ ಗಣರಾಜ್ಯವಾಗಿದೆ ಎಂದು ಆರ್ಮಿ ಮುಖ್ಯ ಜನರಲ್ ಎಂಎಂ ನರಾವಣೆ ತಿಳಿಸಿದ್ದಾರೆ.

Advertisement

ದೇಶದ ಸೇನಾಪಡೆ ಭಾರತದ ಸಂವಿಧಾನದಡಿ ಪ್ರಮಾಣವಚನ ಸ್ವೀಕರಿಸಿದೆ. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಹಾಗೂ ಸಮಾನ ಹಿತಾಸಕ್ತಿ ಒಳಗೊಂಡಿರುವ ಸಂವಿಧಾನ ನಮಗೆ ಮಾರ್ಗದರ್ಶನ ನೀಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇತ್ತೀಚೆಗೆ ಸೇನೆಯ ನಿರ್ಗಮಿತ ಜನರಲ್ ಬಿಪಿನ್ ರಾವತ್, ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದನ್ನು ಟೀಕಿಸಿ ಪ್ರತಿಕ್ರಿಯೆ ನೀಡಿದ್ದರು. ನಾಯಕತ್ವ ಹೊಂದಿದವರು ಜನರನ್ನು ತಪ್ಪು ದಾರಿಯತ್ತ ಕೊಂಡೊಯ್ಯಬಾರದು. ದೇಶದಲ್ಲಿನ ಬಹುಸಂಖ್ಯೆ ವಿವಿಗಳ ಮತ್ತು ಕಾಲೇಜು ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿ ಹಿಂಸಾಚಾರ, ಬೆಂಕಿಹಚ್ಚಿರುವ ಘಟನೆಗಳು ನಡೆದಿರುವುದಕ್ಕೆ ಸಾಕ್ಷಿಯಾಗಿದ್ದೇವೆ. ಇದು ನಾಯಕತ್ವದ ಗುಣವಲ್ಲ ಎಂದು ರಾವತ್ ಕಳೆದ ತಿಂಗಳು ಟೀಕಿಸಿದ್ದರು.

ರಾವತ್ ಹೇಳಿಕೆಯ ನಂತರ ನೂತನ ಜನರಲ್ ನರಾವಣೆ ಈ ಪ್ರತಿಕ್ರಿಯೆ ನೀಡಿದ್ದಾರೆ. ಭವಿಷ್ಯದ ಯುದ್ಧದ ದೃಷ್ಟಿಯಿಂದ ಸಂಕೀರ್ಣವಾದ ತರಬೇತಿಯನ್ನು ಸೇನಾಪಡೆಗೆ ನೀಡಲು ಸಿದ್ಧತೆ ನಡೆಸಲಾಗುತ್ತಿದೆ.ಮುಂದಿನ ಯುದ್ಧಕ್ಕಾಗಿ ನಮ್ಮದು ಗುಣಮಟ್ಟದ ತರಬೇತಿ ವಿನಃ, ಯಾವ ಪ್ರಮಾಣದ್ದು ಎಂಬುದು ಮುಖ್ಯವಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next