Advertisement
2018ರ ಡಿಸೆಂಬರ್‌ನಿಂದ ಈತನ ಸಾಮಾಜಿಕ ಜಾಲತಾಣಗಳಲ್ಲಿನ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದ್ದ ಸೇನಾ ಗುಪ್ತಚರ ಇಲಾಖೆಯ ಮಾಹಿತಿಯನ್ವಯ ಮಧ್ಯಪ್ರದೇಶದ ಎಟಿಎಸ್ ಹಾಗೂ ಕೇಂದ್ರೀಯ ಗುಪ್ತಚರ ದಳದ ಅಧಿಕಾರಿಗಳು ಈತನನ್ನು ಇತ್ತೀಚೆಗೆ ವಶಕ್ಕೆ ಪಡೆದಿದ್ದವು. ಬಂಧನಕ್ಕೆ ಕೆಲವೇ ದಿನಗಳ ಮುನ್ನ ಈತನ ಈ ಕಾನೂನುಬಾಹಿರ ಚಟುವಟಿಕೆಗೆ ಸಂಬಂಧಿಸಿದಂತೆ ಹಲವಾರು ಸಾಕ್ಷ್ಯಾಧಾರಗಳನ್ನು ಕಲೆಹಾಕಲಾಗಿತ್ತು. ಭೋಪಾಲ್‌ನಲ್ಲಿರುವ ವಿಶೇಷ ನ್ಯಾಯಾಲಯದ ಮುಂದೆ ಯೋಧನನ್ನು ಶನಿವಾರ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನನ್ನು 10 ದಿನಗಳ ಕಾಲ ಪೊಲೀಸ್ ವಶಕ್ಕೊಪ್ಪಿಸಿದೆ. ಆದರೂ, ಈತನಿಂದ ಪಾಕಿಸ್ತಾನ ಮೂಲದ ವ್ಯಕ್ತಿಗೆ ಯಾವ್ಯಾವ ಮಾಹಿತಿಗಳು ರವಾನಿಸಲ್ಪಟ್ಟಿವೆ ಎಂಬುದರ ಬಗ್ಗೆ ಮಾಹಿತಿ ಪಡೆಯಲು ಸೇನೆ ನಿರ್ಧರಿಸಿದೆ. ಹಾಗಾಗಿ, ಆತನನ್ನು ತನ್ನ ವಶಕ್ಕೆ ಪಡೆಯಲು ಸೇನೆ ಪ್ರಯತ್ನಿಸುತ್ತಿದೆ ಎಂದು ಮೂಲಗಳು ಹೇಳಿವೆ. Advertisement
ಹನಿಟ್ರ್ಯಾಪ್: ಪಾಕಿಸ್ತಾನಕ್ಕೆ ಯೋಧನಿಂದ ಮಾಹಿತಿ ರವಾನೆ
11:07 PM May 18, 2019 | mahesh |
Advertisement
Udayavani is now on Telegram. Click here to join our channel and stay updated with the latest news.