Advertisement

ಸಿಕ್ಕಿಂನಲ್ಲಿ ಭಾರೀ ಹಿಮಪಾತ: ಸೇನೆಯಿಂದ 400 ಪ್ರವಾಸಿಗರ ರಕ್ಷಣೆ

09:50 PM Mar 12, 2023 | Team Udayavani |

ಗ್ಯಾಂಗ್ಟಾಕ್: ಸಿಕ್ಕಿಂನಲ್ಲಿ ಭಾರೀ ಹಿಮಪಾತದ ನಂತರ ಸಂಕಷ್ಟಕ್ಕೆ ಸಿಲುಕಿದ್ದ ಸುಮಾರು 400 ಪ್ರವಾಸಿಗರನ್ನು ಸೇನೆ ರಕ್ಷಿಸಿದೆ ಮತ್ತು ನಂತರ ವೈದ್ಯಕೀಯ ಆರೈಕೆ ಮತ್ತು ಆಹಾರ ಸೇರಿದಂತೆ ತುರ್ತು ಸಹಾಯವನ್ನು ಒದಗಿಸಿದೆ ಎಂದು ರಕ್ಷಣಾ ಮೂಲಗಳು ಭಾನುವಾರ ತಿಳಿಸಿವೆ.

Advertisement

ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಮಹೇಂದ್ರ ರಾವತ್ ಅವರು, 142 ಮಹಿಳೆಯರು ಮತ್ತು 50 ಮಕ್ಕಳು ಸೇರಿದಂತೆ ಸುಮಾರು 400 ಪ್ರವಾಸಿಗರು, ಸುಮಾರು 100 ವಾಹನಗಳಲ್ಲಿ ಪ್ರಯಾಣಿಸುತ್ತಿದ್ದರು. ಶನಿವಾರ ಮಧ್ಯಾಹ್ನ ಸಿಕ್ಕಿಂನ ನಾತು ಲಾ ಮತ್ತು ತ್ಸೋಮ್ಗೊ (ಚಾಂಗು) ಸರೋವರದಿಂದ ಹಿಂದಿರುಗುವಾಗ ಸಿಕ್ಕಿಬಿದ್ದಿದ್ದಾರೆ.

ತ್ರಿಶಕ್ತಿ ಕಾರ್ಪ್ಸ್‌ನ ಸೇನಾ ಯೋಧರು, ವಕ್ತಾರರು, ಪೊಲೀಸ್ ಮತ್ತು ನಾಗರಿಕ ಆಡಳಿತದ ಸಹಯೋಗದೊಂದಿಗೆ ತಕ್ಷಣವೇ “ಆಪರೇಷನ್ ಹಿಮ್ರಾಹತ್” ಕಾರ್ಯಾಚರಣೆ ನಡೆಸಿ ಪ್ರವಾಸಿಗರನ್ನು ರಕ್ಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next