ನವದೆಹಲಿ: ಇಸ್ರೇಲ್ ದೇಶ ಅತ್ಯಾಧುನಿಕ, ಹೊಸ ಆವೃತ್ತಿಯ ಹೆರಾನ್ ಡ್ರೋನ್‌ಗಳನ್ನು ಭಾರತಕ್ಕೆ ರವಾನಿಸಿದೆ. ಇವು ಭಾರತದ ರಕ್ಷಣಾ ವಲಯಕ್ಕೆ ಭಾರೀ ಬಲ ತುಂಬಿವೆ.
ವಿಶೇಷವಾಗಿ ಲಡಾಖ್‌ನಲ್ಲಿ ಚೀನಾ ದೇಶದ ಕಳ್ಳಾಟಗಳ ಮೇಲೆ ಕಣ್ಣಿಡಲು ಇವು ನೆರವಾಗುತ್ತವೆ. ಕೊರೊನಾ ಕಾರಣದಿಂದ ಈ ಡ್ರೋನ್‌ಗಳ ಆಗಮನ ತಡವಾಗಿದೆ. ಆದರೆ ಪ್ರಧಾನಿ ಮೋದಿ ಅವರು ತುರ್ತು ಆಧಾರದಲ್ಲಿ ಹಣಕಾಸಿನ ನೆರವು ಪಡೆಯುವ ಅಧಿಕಾರವನ್ನು ರಕ್ಷಣಾ ಇಲಾಖೆಗೆ ನೀಡಿದ್ದರು. ಹೀಗೆ ಬಿಡುಗಡೆಯಾದ 500 ಕೋಟಿ ರೂ. ಹಣದಿಂದ ಅತ್ಯಾಧುನಿಕ ಹೆರಾನ್‌ಗಳು ಭಾರತಕ್ಕೆ ತಲುಪಿವೆ.
ಈ ಡ್ರೋನ್‌ಗಳ ವಿಶೇಷವೇನೆಂದರೆ; ಇವುಗಳಲ್ಲಿ ಜ್ಯಾಮಿಂಗ್ ನಿಗ್ರಹ ಸಾಮರ್ಥ್ಯ ಅತ್ಯುತ್ತಮವಾಗಿದೆ. ಹೆರಾನ್‌ನ ಹಿಂದಿನ ಆವೃತ್ತಿಗಳಿಗಿಂತ ಬಲಿಷ್ಠವಾಗಿದೆ. ಚೀನಾ ವಿರುದ್ಧ ಹೋರಾಡಲೆಂದೇ ರಕ್ಷಣಾ ಇಲಾಖೆ ಇಂತಹದ್ದೊಂದು ಕ್ರಮ ತೆಗೆದುಕೊಂಡಿದೆ.
ಇದನ್ನೂ ಓದಿ:ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ
2019ರಲ್ಲಿ ಪಾಕಿಸ್ತಾನದ ಬಾಲಕೋಟ್ ಮೇಲೆ ಭಾರತ ವೈಮಾನಿಕ ದಾಳಿ ಮಾಡಿದಾಗಲೂ ಹೀಗೆ ಅತ್ಯಾಧುನಿಕ ರಕ್ಷಣಾ ಸಾಮಗ್ರಿಗಳನ್ನು ಖರೀದಿಸಲಾಗಿತ್ತು.