Advertisement

ಸೇನಾ ಪ್ರಶ್ನೆಪತ್ರಿಕೆ ಸೋರಿಕೆ: 18 ಮಂದಿ ಬಂಧನ

10:19 AM Feb 27, 2017 | |

ಠಾಣೆ/ನವದೆಹಲಿ: ಸೇನಾ ನೇಮಕ ಮಂಡಳಿ ಆಯೋಜಿಸಿದ್ದ ವಿವಿಧ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಠಾಣೆ, ನಾಸಿಕ್‌, ನಾಗ್ಪುರ ಮತ್ತು ಗೋವಾದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸೈನಿಕ, ಅರೆ ಸೇನಾಪಡೆ ಸಿಬ್ಬಂದಿ ಸೇರಿದಂತೆ 18 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. 

Advertisement

ಕಳೆದ ರಾತ್ರಿ ಈ ಕಾರ್ಯಾಚರಣೆ ನಡೆದಿದೆ. ಬೆಂಗಳೂರು ಸೇರಿದಂತೆ ದೇಶದ ಉಳಿದ ಭಾಗಗಳಲ್ಲಿ ಪ್ರವೇಶ ಪರೀಕ್ಷೆ ಆತಂಕವಿಲ್ಲದೆ ಮುಕ್ತಾಯವಾಗಿದೆ. ಅಹಮದಾಬಾದ್‌, ನಾಗ್ಪುರ್‌, ಅಹ್ಮದನಗರ, ಗೋವಾ, ಸೇರಿ 6 ಕೇಂದ್ರಗಳಲ್ಲಿ ಪರೀಕ್ಷೆ ರದ್ದಾಗಿವೆ. ವಿದ್ಯಾರ್ಥಿಗಳು ಪ್ರತಿ ಪ್ರಶ್ನೆ ಪತ್ರಿಕೆಗೆ 4 ರಿಂದ 5 ಲಕ್ಷ ರೂ. ನೀಡಿದ್ದಾರೆ. ಅವರಿಗೆ ವಾಟ್ಸ್‌ ಆ್ಯಪ್‌ ಮೂಲಕ ಪ್ರಶ್ನೆ ಪತ್ರಿಕೆ ಕಳುಹಿಸಲಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ.  ಲಾಡ್ಜ್ಗಳಲ್ಲಿ ಹಾಗೂ ಇತರೆ ಗೌಪ್ಯ 
ಸ್ಥಳಗಳಲ್ಲಿ ಉತ್ತರ ಬರೆಸಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. 

ಪ್ರಶ್ನೆಪತ್ರಿಕೆ ಸೋರಿಕೆಯ ಮೂಲದ ಪತ್ತೆಗಾಗಿ ಯತ್ನಿಸುತ್ತಿದ್ದು, ತನಿಖೆ ಮುಂದುವರಿದಿದೆ. ಅಕ್ರಮದ ಬಗ್ಗೆ ಠಾಣೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಅವರು ದಾಳಿ ನಡೆಸಿ, ದೂರು ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next