Advertisement

ಲಡಾಖ್‌ನಲ್ಲಿ ಬೋಫೋರ್ಸ್‌ ಹೊವಿಟ್ಜರ್‌ ಫಿರಂಗಿ ಸ್ಥಾಪಿಸಲು ಸಿದ್ಧತೆ

06:50 PM Sep 16, 2020 | Karthik A |

ಮಣಿಪಾಲ: ಪೂರ್ವ ಲಡಾಖ್‌ನಲ್ಲಿ ಚೀನದ ಒಳನುಸುಳುವಿಕೆ ಪ್ರಯತ್ನದಿಂದಾಗಿ ಭಾರತ ಮತ್ತು ಚೀನ ನಡುವಿನ ಉದ್ವಿಗ್ನತೆ ಸಾರ್ವಕಾಲಿಕ ಹೆಚ್ಚಾಗಿದೆ.

Advertisement

ಏತನ್ಮಧ್ಯೆ ಬೋಫೋರ್ಸ್‌ ಹೊವಿಟ್ಜರ್‌ ಫಿರಂಗಿಗಳನ್ನು ಅಲ್ಲಿ ನಿಯೋಜಿಸಲು ಭಾರತೀಯ ಸೇನೆ ಸಿದ್ಧತೆ ನಡೆಸಿದೆ.

ಸುದ್ದಿ ಸಂಸ್ಥೆ ಎಎನ್‌ಐ ಬುಧವಾರ ಈ ಮಾಹಿತಿಯನ್ನು ನೀಡಿದೆ. ಅದರಂತೆ ಸೇನಾ ಎಂಜಿನಿಯರ್‌ಗಳು ಬೋಫೋರ್ಸ್‌ ಫಿರಂಗಿಗಳ ಕ್ಷಮತೆಯನ್ನು ಅಂತಿಮವಾಗಿ ಪರೀಕ್ಷಿಸುತ್ತಿದ್ದಾರೆ. ಈ ಬಂದೂಕುಗಳನ್ನು ಕೆಲವೇ ದಿನಗಳಲ್ಲಿ ಗಡಿಯಲ್ಲಿ ನಿಯೋಜಿಸಲಾಗುತ್ತದೆ.

1980ರಲ್ಲಿ ಬೋಫೋರ್ಸ್‌ ಫಿರಂಗಿಗಳನ್ನು ಸೈನ್ಯಕ್ಕೆ ಸೇರಿಸಲಾಯಿತು. ಅವು ಯಾವುದೇ ಸಂದರ್ಭದಲ್ಲೂ ಯಾವುದೇ ಆ್ಯಂಗಲ್‌ನಿಂದಲೂ ಗುಂಡು ಹಾರಿಸಲು ಶಕ್ತವಾಗಿದೆ. ಈ ಬಂದೂಕುಗಳ ನೆರವಿನಿಂದ ಈಗಾಗಲೇ ಅನೇಕ ಯುದ್ಧಗಳನ್ನು ಗೆಲ್ಲಲು ಸಹಾಯಕವಾಗಿವೆ. 1999ರಲ್ಲಿ ಪಾಕಿಸ್ಥಾನದ ವಿರುದ್ಧ ಕಾರ್ಗಿಲ್‌ ಯುದ್ಧವನ್ನು ಗೆಲ್ಲುವಲ್ಲಿ ಅದು ಪ್ರಮುಖ ಪಾತ್ರ ವಹಿಸಿತ್ತು. ಬೋಫೋರ್ಸ್‌ ಫಿರಂಗಿಗಳು ಅತ್ಯಂತ ಎತ್ತರದ ಬೆಟ್ಟಗಳಲ್ಲಿ ನಿರ್ಮಿಸಲಾದ ಪಾಕಿಸ್ಥಾನದ ಬಂಕರ್‌ ಮತ್ತು ಸೇನಾ ನೆಲೆಗಳನ್ನು ಸುಲಭವಾಗಿ ನಾಶಪಡಿಸಿದ್ದವು. ಇದರಿಂದ ಪಾಕ್‌ ಸೈನ್ಯವು ಭಾರೀ ಹಾನಿಗೊಳಗಾಗಿತ್ತು.

ಫಾರ್ವರ್ಡ್‌ ಸ್ಥಳಗಳಲ್ಲಿ ಸೈನ್ಯದ ಸಿದ್ಧತೆಗಳಿಗೆ ಸಂಬಂಧಿಸಿದಂತೆ ಸೇವೆ ಮತ್ತು ನಿರ್ವಹಣೆಯ ಕಾರ್ಯಗಳ ಬಗ್ಗೆ ಲೆಫ್ಟಿನೆಂಟ್‌ ಕರ್ನಲ್‌ ಪ್ರೀತಿ ಕನ್ವರ್‌ ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ ವಿಶೇಷ ಸಂದರ್ಭಗಳಲ್ಲಿ ಅಗತ್ಯವಿರುವ ಶಸ್ತ್ರಾಸ್ತ್ರಗಳ ನಿರ್ವಹಣೆಯನ್ನು ಸೇನೆಯ ಎಂಜಿನಿಯರ್‌ಗಳು ನೋಡಿಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ. ತಾಂತ್ರಿಕ ಗುಂಪುಗಳು ಟ್ಯಾಂಕ್‌ನ ಫೈರಿಂಗ್‌ ಪಿನ್‌ನಿಂದ ಎಂಜಿನ್‌ನವರೆಗೆ ಎಲ್ಲವನ್ನೂ ನೋಡಿಕೊಳ್ಳಲಿದೆ.

Advertisement

ಮೇ ತಿಂಗಳಿನಿಂದ ಲಡಾಖ್‌ನಲ್ಲಿ ಭಾರತ ಮತ್ತು ಚೀನ ನಡುವೆ 3 ಸುತ್ತು ದಾಳಿ-ಪ್ರತಿ ದಾಳಿ ನಡೆದಿವೆ. ಜೂನ್‌ 15ರಂದು ಗಾಲ್ವಾನ್‌ನಲ್ಲಿ ಉಭಯ ದೇಶಗಳ ನಡುವೆ ನಡೆದ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ್ದರು. ಚೀನದ 40ಕ್ಕೂ ಹೆಚ್ಚು ಸೈನಿಕರು ಕೊಲ್ಲಲ್ಪಟ್ಟರು. ಇತ್ತೀಚೆಗೆ ಚೀನವು ಪಂಗೊಂಗ್‌ ಸರೋವರದ ದಕ್ಷಿಣ ತುದಿಯಲ್ಲಿರುವ ಬೆಟ್ಟವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದಾಗ ಭಾರತೀಯ ಸೈನ್ಯ ಅದನ್ನು ತಡೆದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next