ಗಯಾ: ಮಂಗಳವಾರ ಬೆಳಗ್ಗೆ ಬಿಹಾರದ ಗಯಾ ಜಿಲ್ಲೆಯ ಗದ್ದೆಯೊಂದರಲ್ಲಿ ಭಾರತೀಯ ಸೇನೆಯ ಸಣ್ಣ ವಿಮಾನವೊಂದು ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ ಪತನಗೊಂಡು ಇಬ್ಬರು ಟ್ರೈನಿ ಪೈಲಟ್‌ಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೇನೆಯ ಅಧಿಕಾರಿಗಳ ತರಬೇತಿಗೆ ಬಳಸಲಾಗುವ (ಒಟಿಎ) ಮೈಕ್ರೋಲೈಟ್ ವಿಮಾನವು ಬೆಳಗ್ಗೆ 9.15ರ ಸುಮಾರಿಗೆ ಪಹಾರ್‌ಪುರದ ಗದ್ದೆಯಲ್ಲಿ ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ಪತನಗೊಂಡಿದೆ.
ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿಯೊಬ್ಬರು “ತರಬೇತಿ ಅವಧಿಯಲ್ಲಿ, ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ವಿಮಾನದಲ್ಲಿ ದೊಡ್ಡ ಸದ್ದು ಕೇಳಿಬಂದಿದೆ ಇದಾದ ಕೆಲವೇ ಹೊತ್ತಿನಲ್ಲಿ ವಿಮಾನ ಅಲ್ಲಿನ ಗದ್ದೆಯೊಂದರಲ್ಲಿ ಪತನಗೊಂಡಿದೆ ಎಂದು ತಿಳಿಸಿದ್ದಾರೆ. ಘಟನೆಯ ವೇಳೆ ಇಬ್ಬರು ಟ್ರೈನಿ ಪೈಲಟ್‌ಗಳು ವಿಮಾನದಲ್ಲಿದ್ದರು ಮತ್ತು ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೇಳಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿದ್ದಾರೆ ಎಂದು ಗಯಾದ ಎಸ್‌ಎಸ್‌ಪಿ ಆಶಿಶ್ ಭಾರ್ತಿ ತಿಳಿಸಿದ್ದಾರೆ.
ಇದನ್ನೂ ಓದಿ : China ಜತೆ ಮಿಲಿಟರಿ ಒಪ್ಪಂದ -ಮೇ 10ರೊಳಗೆ ದೇಶ ತೊರೆಯಿರಿ; ಭಾರತೀಯ ಸೇನೆಗೆ ಮಾಲ್ಡೀವ್ಸ್