Advertisement

Army;ಕಮರಿಗೆ ಬಿದ್ದ ವಾಹನ: ಪ್ಯಾರಾಟ್ರೂಪರ್ ಮೃ*ತ್ಯು,5 ಕಮಾಂಡೋಗಳಿಗೆ ಗಾಯ

10:26 AM Sep 18, 2024 | Team Udayavani |

ರಜೌರಿ: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಮಂಗಳವಾರ ಸಂಜೆ (ಸೆ17) ಸೇನಾ(Army) ವಾಹನವು ರಸ್ತೆಯಿಂದ ಸ್ಕಿಡ್ ಆಗಿ ಆಳವಾದ ಕಮರಿಗೆ ಬಿದ್ದಿದ್ದು ಸೇನಾ ಪ್ಯಾರಾಟ್ರೂಪರ್ ಮೃತಪಟ್ಟಿದ್ದು, ಐವರು ಕಮಾಂಡೋಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಗಡಿ ಜಿಲ್ಲೆಯ ಮಾನ್‌ಕೋಟೆ ಪ್ರದೇಶದಲ್ಲಿ ವಾಹನ ಅಪಘಾತಕ್ಕೀಡಾಗಿದ್ದು ಸೈನಿಕರು ಕರ್ತವ್ಯದಲ್ಲಿದ್ದರು. ಜಮ್ಮು ಮೂಲದ ವೈಟ್ ನೈಟ್ ಕಾರ್ಪ್ಸ್ ಪೋಸ್ಟ್‌ನ ಲ್ಯಾನ್ಸ್ ನಾಯಕ್ ಬಲ್ಜೀತ್ ಸಿಂಗ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಜಿಒಸಿ (General Officer Commanding) ವೈಟ್ ನೈಟ್ ಕಾರ್ಪ್ಸ್ ಮತ್ತು ಎಲ್ಲಾ ಶ್ರೇಣಿಗಳು ಎಲ್/ಎನ್‌ಕೆ ಬಲ್ಜೀತ್ ಸಿಂಗ್ ಅವರ ಕುಟುಂಬಕ್ಕೆ ಆಳವಾದ ಸಂತಾಪವನ್ನು ವ್ಯಕ್ತಪಡಿವೆ.

ಕರ್ತವ್ಯದ ಸಮಯದಲ್ಲಿ ರಾಜೌರಿಯ ಮಂಜಕೋಟೆ ಬಳಿ ನಡೆದ ದುರಂತ ರಸ್ತೆ ಅಪಘಾತದಲ್ಲಿ ತನ್ನ ಪ್ರಾಣವನ್ನು ಕಳೆದುಕೊಂಡ ಕೆಚ್ಚೆದೆಯ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಸೇನೆ ತಿಳಿಸಿದೆ.ಅಪಘಾತದಲ್ಲಿ ಸೇನಾ ವಾಹನ ಸಂಪೂರ್ಣ ಜಖಂ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸ್ಥಳೀಯ ಗ್ರಾಮಸ್ಥರು ಸೇರಿದಂತೆ ರಕ್ಷಕರು ಗಾಯಗೊಂಡ ಆರು ಕಮಾಂಡೋಗಳನ್ನು ಸ್ಥಳಾಂತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next