Advertisement

Marriage ಕಾರಣಕ್ಕೆ ಸೇನೆ ನರ್ಸ್‌ ವಜಾ: 60 ಲ. ರೂ. ಪರಿಹಾರಕ್ಕೆ ಸುಪ್ರೀಂ ಆದೇಶ

12:11 AM Feb 22, 2024 | Team Udayavani |

ಹೊಸದಿಲ್ಲಿ: ವಿವಾಹದ ಹಿನ್ನೆಲೆಯಲ್ಲಿ ಸೇವೆಯಿಂದ ವಜಾಗೊಳಿಸಲಾಗಿದ್ದ ಸೇನೆಯ ನರ್ಸ್‌ ಒಬ್ಬರಿಗೆ 60 ಲಕ್ಷ ರೂ.ಗಳ ಪರಿಹಾರ ನೀಡುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಜತೆಗೆ ಮದುವೆಯಾದರೆಂಬ ಕಾರಣ ನೀಡಿ, ಮಹಿಳೆಯರನ್ನು ಉದ್ಯೋಗದಿಂದ ವಜಾಗೊಳಿಸುವುದು ಲಿಂಗ ತಾರತಮ್ಯವಾಗುತ್ತದೆ. ಅಂಥ ಯಾವುದೇ ಕಾನೂನನ್ನು ಸಾಂವಿಧಾನಿಕವಾಗಿ ಅನುಮತಿಸಲಾಗುವುದಿಲ್ಲ ಎಂದಿದೆ.

Advertisement

1988ರಲ್ಲಿ ಮದುವೆಯಾದ ಬಳಿಕ ಸೆಲಿನಾ ಜಾನ್‌ ಎಂಬವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಆಕೆ 2012ರಲ್ಲಿ ಸಶಸ್ತ್ರ ಪಡೆಗಳ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯ ಮಂಡಳಿ ಅವರ ಪರ ತೀರ್ಪು ನೀಡಿ, ಮತ್ತೆ ಉದ್ಯೋಗ ಸೇರ್ಪಡೆಗೆ ಆದೇಶಿಸಿತ್ತು. 2019ರಲ್ಲಿ ಮತ್ತೆ ಆ ಆದೇಶ ಪ್ರಶ್ನಿಸಿ ಕೇಂದ್ರ ಸರಕಾರ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿತ್ತು. ಇದೀಗ ಸುಪ್ರೀಂ ಅರ್ಜಿ ಆಲಿಸಿ, ಮಹಿಳೆಗೆ 60 ಲಕ್ಷ ರೂ. ಪರಿಹಾರ ನೀಡುವಂತೆ ಕೇಂದ್ರಕ್ಕೆ ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next