Advertisement

ಸೇನೆಯ ಬತ್ತಳಿಕೆಗೆ ಮಿಲಾನ್‌-2ಟಿ

11:55 PM Mar 19, 2021 | Team Udayavani |

ಹೊಸದಿಲ್ಲಿ: ಭಾರತೀಯ ಸೇನೆಯ ಸಂಘಟಿತ ದಾಳಿ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಮುಂದಾಗಿರುವ ರಕ್ಷಣ ಇಲಾಖೆಯು ಭಾರತ್‌ ಡೈನಾಮಿಕ್ಸ್‌ ಲಿ. (ಬಿಡಿಎಲ್‌) ಜತೆಗೆ 4,960 “ಮಿಲಾನ್‌-2ಟಿ’ ಆ್ಯಂಟಿ-ಟ್ಯಾಂಕ್‌ ಗೈಡೆಡ್‌ ಕ್ಷಿಪಣಿ ವ್ಯವಸ್ಥೆ (ಎಟಿಜಿಎಂ)ಗಳನ್ನು ಖರೀದಿಸುವ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ.

Advertisement

ಒಟ್ಟು 1,188 ಕೋಟಿ ರೂ.ಗಳ ಒಪ್ಪಂದ ಇದಾಗಿದ್ದು, ಬಿಡಿಎಲ್‌ ಮುಂದಿನ ಮೂರು ವರ್ಷಗಳಲ್ಲಿ ಈ ಕ್ಷಿಪಣಿಗಳನ್ನು ಭೂ ಸೇನೆಗೆ ಹಸ್ತಾಂತರಿಸಲಿದೆ. ಈ ಒಪ್ಪಂದ ಪ್ರಧಾನಿ ಮೋದಿಯವರ ಆತ್ಮನಿರ್ಭರ ಭಾರತದಡಿ ರಕ್ಷಣ ಇಲಾಖೆಯನ್ನು ಮತ್ತಷ್ಟು ಶಕ್ತಿಶಾಲಿ ಹಾಗೂ ಸ್ವಾವಲಂಬಿ ಮಾಡುವ ಮಹತ್ವದ ಹೆಜ್ಜೆಯಾಗಿದೆ.

ಇದನ್ನೂ ಓದಿ:ನಂದಿ ನಾಡ ಕಚೇರಿಯಲ್ಲಿ ಸಕಾಲಸೇವೆ ಸ್ಥಗಿತ : ಸಾರ್ವಜನಿಕರ ಪರದಾಟ

ಫ್ರಾನ್ಸ್‌ ತಂತ್ರಜ್ಞಾನ

ಮೂಲತಃ ಇದು ಫ್ರೆಂಚ್‌ ಯುದ್ಧ ತಂತ್ರಜ್ಞಾನ; ಮೂಲ ಹೆಸರು ಟ್ಯಾಂಡೆಮ್‌ ವಾರ್‌ಹೆಡ್‌ ಎಟಿಜಿಎಂ. ಫ್ರಾನ್ಸ್‌ನ ಎಂಬಿಡಿಎ ಮಿಸೈಲ್‌ ಸಿಸ್ಟಂನಿಂದ ಪರವಾನಿಗೆ ಪಡೆದು ಇದನ್ನು ಭಾರತದಲ್ಲಿ ಪರಿಷ್ಕರಿಸಲಾಗಿದೆ.

Advertisement

ಏನಿದು ಮಿಲಾನ್‌-2ಟಿ?

ಶತ್ರು ಟ್ಯಾಂಕರ್‌ಗಳನ್ನು ದೂರದಿಂದಲೇ ನಾಶಗೊಳಿಸ ಬಲ್ಲ ಕ್ಷಿಪಣಿ ವ್ಯವಸ್ಥೆ. ಪೋರ್ಟಬಲ್‌ ಆಗಿದ್ದು, ಒಂದೆಡೆ ಯಿಂದ ಮತ್ತೂಂದೆಡೆಗೆ ಸುಲಭವಾಗಿ ಕೊಂಡೊಯ್ಯ ಬಹುದು. ಟ್ಯಾಂಕರ್‌ಗಳಿಂದ ಅಥವಾ ನೆಲದ ಮೇಲಿಂದ ಉಡಾಯಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next