ಭೋಪಾಲ್: ಮಹಿಳೆ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಯೋಧನೊಬ್ಬನನ್ನು ಬಂಧಿಸಿರುವ ಘಟನೆ ಶನಿವಾರ (ಸೆ.14ರಂದು) ಮಧ್ಯಪ್ರದೇಶದ ಇಂದೋರ್ ನಡೆದಿರುವುದು ವರದಿಯಾಗಿದೆ.
ಸಂಜಯ್ ಬಂಧಿತ ಯೋಧ.
ಅಸ್ಸಾಂನಲ್ಲಿ ನಿಯೋಜನೆಗೊಂಡಿದ್ದ ಸಂಜಯ್ ರಜೆಯ ಮೇಲೆ ಇಂದೋರ್‌ಗೆ ಬಂದಿದ್ದರು. ಈ ವೇಳೆ ಆತನಿಗೆ ಪರಿಚಯವಿದ್ದ ಮಹಿಳೆಯೊಬ್ಬರು ಹೊಟೇಲ್ ನಲ್ಲಿ ತಂಗಿದ್ದ ಸಂಜಯ್ ರನ್ನು ಭೇಟಿ ಆಗಲು ಬಂದಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆ ಮೇಲೆ ಸಂಜಯ್ ದೈಹಿಕವಾಗಿ ಹಲ್ಲೆ ನಡೆಸಿ, ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.
ಅತ್ಯಾಚಾರ ಸಂತ್ರಸ್ತೆ ಹೊಟೇಲ್‌ನಿಂದ ಪಾರಾಗಿ ಬಂದು, ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.
ಪೊಲೀಸರು ಆರೋಪಿ ಸಂಜಯ್ ನನ್ನು ಬಂಧಿಸಿದ್ದಾರೆ. ಪೊಲೀಸರು ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಸದ್ಯ ಆಕೆ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಆರೋಪಿ ಘಟನೆ ಸಂಬಂಧ ವಿಡಿಯೋವನ್ನು ಚಿತ್ರೀಕರಿಸಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಆರೋಪಿಯು ಮಹಿಳೆಯ ಖಾಸಗಿ ಭಾಗಗಳಿಗೆ ತೀವ್ರವಾಗಿ ಗಾಯಗೊಳಿಸಿದ್ದಾನೆ. ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ
ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.