ಜಬಲ್‌ಪುರ: ಮಧ್ಯಪ್ರದೇಶದಲ್ಲಿರುವ ಆರ್ಡಿನನ್ಸ್ ಫ್ಯಾಕ್ಟರಿ ಬೋರ್ಡ್‌ನಲ್ಲಿ ತಯಾರಿಸಲಾದ ಆರು ಧನುಶ್ ಗನ್‌ಗಳನ್ನು ಸೋಮವಾರ ಸೇನೆಗೆ ಹಸ್ತಾಂತರಿಸಲಾಗಿದೆ. 114 ಧನುಶ್ ಗನ್‌ಗಳ ಪೈಕಿ ಮೊದಲ ಕಂತಿನಲ್ಲಿ 6 ಗನ್‌ಗಳನ್ನು ಹಸ್ತಾಂತರಿಸ ಲಾಗಿದೆ. ಇದೇ ಮೊದಲ ಬಾರಿಗೆ 155 ಎಂಎಂ 45 ಕ್ಯಾಲಿಬರ್ ಗನ್‌ಗಳನ್ನು ಭಾರತದಲ್ಲೇ ತಯಾರಿಸಲಾಗಿದ್ದು, ಇದು 38 ಕಿ.ಮೀ. ದೂರದವರೆಗೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ ಎಂದು ಒಎಫ್ಬಿ ಚೇರ್‌ಮನ್ ಸೌರಭ್ ಕುಮಾರ್ ಹೇಳಿ ದ್ದಾರೆ. ಇದು ಮೇಕ್ ಇನ್ ಇಂಡಿಯಾ ಅಡಿಯ ಮಹತ್ವದ ಯೋಜನೆಯಾಗಿದೆ. ಗನ್ ತೂಕ 13 ಟನ್ ಆಗಿದ್ದು, ಗುಡ್ಡಗಾಡು ಪ್ರದೇಶದಲ್ಲೂ ಸರಾಗವಾಗಿ ಸಾಗಿಸ ಬಹುದು. ಒಂದೇ ಬಾರಿಗೆ ಮೂರರಿಂದ ಆರು ಗನ್‌ಗಳಿಂದ ಉಡಾಯಿಸಬಹುದಾಗಿದ್ದು, ಪ್ರತಿ ಗನ್‌ನಲ್ಲೂ 42 ಸುತ್ತು ಗುಂಡುಗಳನ್ನು ಭರ್ತಿ ಮಾಡ ಬಹುದು. ನ್ಯಾವಿಗೇಶನ್, ಬ್ಯಾಲಿಸ್ಟಿಕ್ ಸಾಮರ್ಥ್ಯ ಇದರಲ್ಲಿದ್ದು. ಗುರಿ ನಿಗದಿಸುವುದು ಅತ್ಯಂತ ಸುಲಭ. ಮುಂದಿನ ದಿನಗಳಲ್ಲಿ ಟ್ರಕ್‌ನಲ್ಲಿ ಅಳವಡಿಸಬಹುದಾದ ಗನ್ ಅಭಿವೃದ್ಧಿಪಡಿಸಲಿದ್ದೇವೆ ಎಂದು ಕುಮಾರ್ ಹೇಳಿದ್ದಾರೆ. ಸೇನೆ, ಡಿಆರ್‌ಡಿಒ, ಡಿಜಿಕ್ಯೂಎ, ಭಾರತ್ ಎಲೆಕ್ಟ್ರಾನಿಕ್ಸ್, ಸೇಯ್ಲ ಹಾಗೂ ಇತರ ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ಧನುಶ್ ಅಭಿವೃದ್ಧಿಪಡಿಸಲಾಗಿದೆ.