ಕಾನ್ಪುರ್:ಗೆಳೆಯನಿಗೆ ಮಾದಕ ದ್ರವ್ಯ ಕೊಟ್ಟ ನಂತರ ಆತನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ ಘಟನೆಗೆ ಸಂಬಂಧಿಸಿದಂತೆ ಸೇನಾ ಕರ್ನಲ್ ನನ್ನು ಮಂಗಳವಾರ(ಡಿಸೆಂಬರ್ 16,2020) ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಘಟನೆ ನಂತರ ಪರಾರಿಯಾಗಲು ಯತ್ನಿಸಿದ್ದ ಕರ್ನಲ್ ನೀರಜ್ ಗೆಹ್ಲೋಟ್ ಬಂಧನಕ್ಕೊಳಗಾಗಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ರಾಜ್ ಕುಮಾರ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಕರ್ನಲ್ ನೀರಜ್ ಗೆಹ್ಲೋಟ್ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದಾಗ ಬಂಧಿಸಲಾಯ್ತು ಎಂದು ಕಂಟೋನ್ಮೆಂಟ್ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಪಾಠಕ್ ತಿಳಿಸಿದ್ದಾರೆ.
ಇದನ್ನೂ ಓದಿ:ದೇಶದ ಮೊದಲ ಹಿಂದ್ ಕೇಸರಿ : ಪೈಲ್ವಾನ್ ಶ್ರೀಪತಿ ಖಂಚನಾಳೆ ನಿಧನ
ಆಫೀಸರ್ಸ್ ಮೆಸ್ ನಲ್ಲಿ ಗೆಳೆಯನ ಪತ್ನಿ ಮೇಲೆ ಅತ್ಯಾಚಾರ ಎಸಗಿದ ನಂತರ ಕರ್ನಲ್ ನೀರಜ್ ವಿರುದ್ಧ ರಷ್ಯನ್ ಮಹಿಳೆಯ ಪತಿ ಕಂಟೋನ್ಮೆಂಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.