ಶ್ರೀನಗರ: ಒಂದು ಕಾಲದಲ್ಲಿ ಕಣಿವೆ ರಾಜ್ಯದ ಭಯೋತ್ಪಾದಕರ ತವರಾಗಿದ್ದ ಶೋಪಿಯಾನ್ ಜಿಲ್ಲೆಯಲ್ಲೀಗ ಸೇನೆಯದ್ದೇ ಪಾರುಪತ್ಯ. ಉಗ್ರರ ನಿರ್ಮೂಲನೆಯತ್ತ ಹೆಜ್ಜೆ ಇಟ್ಟಿರುವ ಭದ್ರತಾ ಪಡೆಗಳು ತಮ್ಮ ಕಾರ್ಯದಲ್ಲಿ ಯಶಸ್ವಿಯಾಗುತ್ತಿದ್ದು, ದಕ್ಷಿಣ ಕಾಶ್ಮೀರದ ಉಗ್ರರ ಸ್ವರ್ಗವನ್ನು ಸ್ವತ್ಛಗೊಳಿಸುವ ನಿಟ್ಟಿನಲ್ಲಿ ಗೆಲುವು ಸಾಧಿಸಿವೆ.
ಭಯೋತ್ಪಾದಕರಿಗೆ “ಗ್ರೌಂಡ್ ಝೀರೋ’ ಆಗಿದ್ದ ಶೋಪಿಯಾನ್‌ನಲ್ಲಿ ಸದ್ಯದಲ್ಲೇ ಸೇನಾ ಶಿಬಿರಗಳು, ಮೀಸಲು ತುಕಡಿಗಳು ತಲೆ ಎತ್ತಲಿವೆ. ಇದಕ್ಕಾಗಿ ಸಿಆರ್‌ಪಿಎಫ್ ಸಿದ್ಧತೆ ನಡೆಸಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ, ನರಕವಾಗಿದ್ದ ಜಿಲ್ಲೆಯೊಂದು ಸ್ವರ್ಗವಾಗಲಿದೆ.
ಉಗ್ರ ನಿರ್ಮೂಲನೆ: ಪಾಕ್‌ನಿಂದ ಒಳನು ಸುಳುತ್ತಿದ್ದ ಉಗ್ರರು, ಕಾಶ್ಮೀರ ಕಣಿವೆಯಲ್ಲಿದ್ದ ಭಯೋತ್ಪಾದಕರಿಗೆ ಇದೇ ಜಿಲ್ಲೆ ಭದ್ರಕೋಟೆಯಾಗಿತ್ತು. ಇದನ್ನು ಭೇದಿಸುವುದು ಅಷ್ಟು ಸುಲಭದ ಕೆಲಸವಾಗಿ ರಲಿಲ್ಲ. ಆದರೆ, ಭದ್ರತಾ ಪಡೆಗಳ ನಿರಂತರ ಕಾರ್ಯಾ ಚರಣೆಯ ಫಲವಾಗಿ ಇದು ಸಾಧ್ಯವಾಗಿದೆ. ಹಿಜ್ಬುಲ್ ಮುಜಾ ಹಿದೀನ್ ಉಗ್ರ ಸಂಘಟನೆಯ ಪೋಸ್ಟರ್ ಬಾಯ್ ಬುರ್ಹಾನ್ ವಾನಿಯನ್ನು ಕಳೆದ ವರ್ಷ ಜು.8ರಂದು ಸದೆಬಡಿದ ಮೇಲೆ ಸೇನೆಯ ಬಲ ಹೆಚ್ಚ ತೊಡಗಿತು. ಸುಮಾರು 37 ಮಂದಿ ಯುವಕರು ಆ ಜಿಲ್ಲೆಯನ್ನೇ ಬಿಟ್ಟು ಪರಾರಿ ಯಾದರೆ, ಉಗ್ರ ಸಂಘಟ ನೆಗಳ ಕಮಾಂಡರ್‌ಗಳು, ನೇಮಕ ಮಾಡುವವರು, ಹಣಕಾಸು ಪೂರೈಸುವವರು ಸೇರಿದಂತೆ ಹಲವು ಉಗ್ರರನ್ನು ಎನ್‌ಕೌಂಟರ್ ಮೂಲಕ ಹತ್ಯೆಗೈಯ್ಯಲಾಯಿತು. ಇನ್ನೂ ಅನೇಕ ಉಗ್ರರು ಎನ್‌ಕೌಂಟರ್‌ಗೆ ಹೆದರಿ ಕಾಲ್ಕಿàಳ ತೊಡಗಿದರು. ಪರಿಣಾಮ, ಇದೀಗ ಶೋಪಿಯಾನ್‌ನಲ್ಲಿ ಉಗ್ರರ ಚಲನವಲನ ಕಡಿಮೆಯಾಗಿದೆ. ಅಲ್ಲಿ ಸೇನಾ ಶಿಬಿರಗಳು ಮತ್ತು ಸಾವಿರ ಮಂದಿ ಇರುವ ಮೀಸಲು ತುಕಡಿ ಸ್ಥಾಪಿಸುವ ಮೂಲಕ ಮುಂದೆಂದೂ ಉಗ್ರರು ಚಿಗುರೊಡೆಯದಂತೆ ಸಿಆರ್‌ಪಿಎಫ್ ತಂತ್ರ ರೂಪಿಸಿದೆ.
ಉಗ್ರರ ದಾಳಿಗೆ ಮಹಿಳೆ ಬಲಿ: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರನ್ನು ಗುರಿ ಯಾಗಿ ಸಿ ಕೊಂಡು ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆ ಯಲ್ಲಿ ಒಬ್ಬ ಮಹಿಳೆ ಮೃತಪಟ್ಟರೆ, ಮತ್ತೂಬ್ಬರು ಗಾಯಗೊಂಡಿದ್ದಾರೆ. ಇನ್ನೊಂದೆಡೆ, ನ್ಯಾಷನಲ್ ಕಾನ್ಫರೆನ್ಸ್(ಎನ್‌ಸಿ) ನಾಯಕ ಮೊಹಮ್ಮದ್ ಅಶ್ರಫ್ ಭಟ್ ಮನೆ ಮೇಲೆ ಉಗ್ರರು ಗ್ರೆನೇಡ್ ಎಸೆದಿದ್ದು, ಸಿಆರ್‌ಪಿಎಫ್ ಯೋಧರೊಬ್ಬರು ಗಾಯಗೊಂಡಿದ್ದಾರೆ.
ಪಾಕ್ ಗುಂಡಿನ ದಾಳಿ: ಬಾರಾಮುಲ್ಲಾ ಜಿಲ್ಲೆಯ ಉರಿ ವಲಯದಲ್ಲಿ ಪಾಕಿಸ್ಥಾನ ಕದನ ವಿರಾಮ ಉಲ್ಲಂ ಸಿದೆ. ಸತತ 2ನೇ ದಿನವೂ ಪಾಕ್ ಸೈನಿಕರು ಗುಂಡಿನ ದಾಳಿ ನಡೆಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.