ತಿರುವನಂತಪುರಂ: ಕೇರಳದ ಹಿರಿಯ ಸಿಪಿಐ(ಎಂ) ನಾಯಕ ಕೊಡಿಯೇರಿ ಬಾಲಕೃಷ್ಣನ್ ದೇಶಕಾಯುವ ಸೈನಿಕರ ವಿರುದ್ಧ ವಿವಾದಿತ ಹೇಳಿಕೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಭಾಷಣವೊಂದರಲ್ಲಿ ಮಾತನಾಡಿದ ಬಾಲಕೃಷ್ಣನ್ ಸೇನೆಗೆ ಪರಮಾಧಿಕಾರ ನೀಡಿದಾಗ ಯಾರಿಗೆ ಏನೂ ಬೇಕಾದರು ಮಾಡಬಹುದು.ಸೈನಿಕರು ಮಹಿಳೆಯರನ್ನು ಅಪಹರಿಸಿ ಅತ್ಯಾಚಾರವನ್ನೂ ನಡೆಸಬಹುದು ಎಂದಿದ್ದಾರೆ.
ಯಾವೆಲ್ಲಾ ರಾಜ್ಯದಲ್ಲಿ ಸೇನೆ ನಿಯೋಜಿಸಲಾಗಿದೆಯೋ ಅಲ್ಲೆಲ್ಲಾ ಪರಿಸ್ಥತಿ ಇದೇ ರೀತಿಯದಾದಗಿದ್ದು , ಸೈನಿಕರು ಮಾಡಿರುವ ದುಷ್ಕೃತ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿವೆ ಎಂದಿದ್ದಾರೆ.
ಕಣ್ಣೂರಿನಲ್ಲಿ ಸೇನೆ ನಿಯೋಜಿಸಿದರೆ ಸೈನಿಕರು ಮತ್ತು ಜನರ ನಡುವೆ ಘರ್ಷಣೆಗಳು ನಡೆಯಬಹುದು. ಎಲ್ಲಿಯಾದರೂ ನಾಲ್ಕಕ್ಕಿಂತ ಹೆಚ್ಚು ಜನರು ಜೊತೆಯಾಗಿ ನಿಂತಿದ್ದರೆ ಗುಂಡನ್ನೂ ಹಾರಿಸಬಹುದು ಎಂದಿದ್ದಾರೆ.
ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸೈನಿಕರು ಯುದ್ಧದಂತಹ ಸನ್ನಿವೇಶ ಎದುರಾದಾಗ ನಿರ್ಧಾರಗಳನ್ನ ತೆಗೆದುಕೊಳ್ಳಲು ಸ್ವತಂತ್ರರು ಎಂದ ದಿನದ ಬಳಿಕ ಬಾಲಕೃಷ್ಣನ್ ಈ ಹೇಳಿಕೆ ನೀಡಿ ಹೊಸ ವಿವಾದ ಹುಟ್ಟು ಹಾಕಿದ್ದಾರೆ.