Advertisement
ತೋಟಗಾರಿಕೆ ಇಲಾಖೆ, ಸ್ವಾತಂತ್ರೊéàತ್ಸವದ ಹಿನ್ನೆಲೆಯಲ್ಲಿ “ಫಲಪುಷ್ಪ ಪ್ರದರ್ಶನ’-2018 ಏರ್ಪಡಿಸಿದ್ದು, ಯುದ್ಧ ಕ್ಷಿಪಣಿಗಳು, ಸೇನಾ ಸಾಧಕರಿಗೆ ನೀಡುವ ಶೌರ್ಯ ಪ್ರಶಸ್ತಿ ವಿವಿಧ ವಿಚಾರಗಳು ಚಿತ್ತಾಕರ್ಷಕ ಡೆಂಡೋಬ್ರಿಯಂ, ಮೊಖಾರ ಆರ್ಕಿಡ್, ಆಂಥೋರಿಯಂ, ಗುಲಾಬಿ, ಲಿಲ್ಲಿ, ಲಿಲಿಯಂ ಪುಷ್ಪಗಳು ತಿಳಿಸಿಕೊಡುತ್ತಿವೆ.
Related Articles
Advertisement
1ಲಕ್ಷ 20 ಸಾವಿರ ಹೂ ಬಳಕೆ: ಸೇನಾ ಮಾದರಿ ನಿರ್ಮಾಣ ಮಾಡುವುದಕ್ಕೆ ಸುಮಾರು 1ಲಕ್ಷದ 20 ಸಾವಿರಕ್ಕೂ ಅಧಿಕ ಹೂವುಗಳನ್ನು ಬಳಕೆ ಮಾಡಲಾಗಿದೆ. 15 ಮಂದಿ ನುರಿತ ಹೂ-ಜೋಡಣೆಕಾರರು ಹೂಗಳ ಜೋಡಣಾ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಒಂದು ಬಾರಿಗೆ 40 ಸಾವಿರ ಹೂಗಳಂತೆ ಒಟ್ಟು 3ಬಾರಿ ಹೂಗಳನ್ನು ಬದಲಾವಣೆ ಮಾಡಲಾಗುತ್ತಿದ್ದು, ಸ್ನೇಹಾ ಪ್ರೋರಿಸ್ಟ್‌ನ ಟಿ.ಎಸ್. ಜಗದೀಶ್ ಅವರು ಪುಷ್ಪ ಜೋಡಣೆ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
20 ರೂಪಾಯಿಗೆ “ಕಾದಂಬರಿ’: ಸ್ವಾತಂತ್ರೊತ್ಸವದ ಹಿನ್ನೆಲೆಯಲ್ಲಿ ಬಿ.ಎಸ್.ಗೌಡ ಬುಕ್ ಸ್ಟಾಲ್ ಅ.ನ.ಕೃ, ತ.ರಾ.ಸು, ಎಂ.ಕೆ.ಇಂದಿರಾ, ಬೀಚಿ ಸೇರಿದಂತೆ ಖ್ಯಾತ ಕಾದಂಬರಿಕಾರರ ಪುಸ್ತಕಗಳನ್ನು 20 ರೂ.ಗಳಿಗೆ ನೀಡುತ್ತಿದೆ.
ವಿದೇಶಿಯರ ಕಲರವ: “ಫಲಪುಷ್ಪ ಪ್ರದರ್ಶನ’ ಆರಂಭದ ದಿನವೆ ಜಪಾನ್‌ನ ಆ್ಯಂಡಿ, ಹೆಲೆನಾ, ಮಲಾನಿ ನೇತೃತ್ವದ ಸ್ನೇಹಿತರ ತಂಡ ಆಗಮಿಸಿತ್ತು. ಈ ವೇಳೆ ಪ್ರತ್ರಿಕಿಯಿಸಿದ ಆ್ಯಂಡಿ, ಭಾರತೀಯ ಸೇನೆಯ ಯಶೋಗಾಥೆಯನ್ನು ಹೂವಿನಲ್ಲಿ ಕಟ್ಟಿಕೊಟ್ಟಿರುವ ತೋಟಗಾರಿಕಾ ಇಲಾಖೆಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಭಾರತ ನನಗೆ ಅಚ್ಚುಮೆಚ್ಚಿನ ತಾಣವಾಗಿದೆ ಎಂದರು.
ಸೇನೆಯ ಬಗ್ಗೆ ಇಷ್ಟು, ತಿಳುವಳಿಕೆ ಇರಲಿಲ್ಲ. ಆದರೆ ಇಲ್ಲಿಗೆ ಬಂದು ಫಲಪುಷ್ಪ ವೀಕ್ಷಿಸಿದೆ ಸೇನೆಯ ಬಗ್ಗೆ ಮತ್ತಷ್ಟು ಗೌರವ ಭಾವನೆ ಮೂಡಿತು.-ವೈಭವ್, ವಿದ್ಯಾರ್ಥಿ ನಂದಿನಿ ಲೇಔಟ್. ದೇಶದ ಹಲವು ಕಡೆಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ಹಲವು ರೀತಿಯ ಅನುಭವ ಕಂಡಿದ್ದೇನೆ. ಲಾಲ್‌ಬಾಗ್‌ನಲ್ಲಿ ಸೇನೆಯ ಬಗ್ಗೆ ಫಲಪುಷ್ಪ ಪ್ರದರ್ಶನ ಹಮ್ಮಿಕೊಂಡಿರುವುದು ನನಗೆ ಅತೀವ ಖುಷಿ ಕೊಟ್ಟಿದೆ.
-ಬಸ್ಸಿಲಾಲ್, ಸೇನಾಯೋಧ ಅಗರ್ತಲ.