Advertisement

ರಾಜ್ಯಗಳಿಂದ ಸಶಸ್ತ್ರ ಪಡೆಗಳ ವಿಶೇಷ ಕಾಯ್ದೆ ಆಂಶಿಕ ವಾಪಸ್‌?

11:54 PM Dec 25, 2021 | Team Udayavani |

ಹೊಸದಿಲ್ಲಿ: ದಶಕಗಳಿಂದ ವಿವಾದದ ಸುಳಿಯಲ್ಲಿ ಸಿಲುಕಿರುವ ಸಶಸ್ತ್ರ ಪಡೆಗಳ ವಿಶೇಷ ಕಾಯ್ದೆ (ಎಎಫ್ಎಸ್‌ಪಿಎ)ಯನ್ನು ನಾಗಾಲ್ಯಾಂಡ್‌ ಸೇರಿದಂತೆ ಈಶಾನ್ಯ ಭಾಗದ ಕೆಲವು ರಾಜ್ಯಗಳಿಂದ ಆಂಶಿಕವಾಗಿ ವಾಪಸ್‌ ಪಡೆವ ಸಾಧ್ಯತೆಗಳು ಇವೆ. ಮಾಸಾಂತ್ಯದ ಒಳಗಾಗಿ ಕೇಂದ್ರ ಸರಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳನ್ನು ಉಲ್ಲೇಖೀಸಿ “ದ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಶರ್ಮ ಬಿಸ್ವಾ ಮತ್ತು ನಾಗಾಲ್ಯಾಂಡ್‌ ಮುಖ್ಯಮಂತ್ರಿ ನೆಪ್ಯೂ ರಿಯೋ ಅವರ ಜತೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನಡುವಿನ ಮಾತುಕತೆ ಬಳಿಕ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.

Advertisement

ನಾಗಾಲ್ಯಾಂಡ್‌ನ‌ಲ್ಲಿ ಮಾಸಾಂತ್ಯಕ್ಕೆ ಸದ್ಯ ವಿಸ್ತರಿಸಲಾಗಿ ರುವ ವಿಶೇಷ ಕಾಯ್ದೆಯ ಅವಧಿ ಮುಕ್ತಾಯವಾಗಲಿದೆ. ಒಂದು ವೇಳೆ, ಕಾಯ್ದೆ ಮುಂದುವರಿಸದೇ ಇದ್ದರೆ ರಾಜ್ಯ ಪೊಲೀಸ್‌ ಇಲಾಖೆಯೇ ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಹೊಣೆ ಹೊರಬೇಕಾಗುತ್ತದೆ ಎಂದು ಗೃಹ ಸಚಿವ ಅಮಿತ್‌ ಶಾ ನಾಗಾಲ್ಯಾಂಡ್‌ ಸಿಎಂಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ಪ್ರಧಾನಿ ಜತೆಗೆ ಕೇಂದ್ರ ಗೃಹ ಸಚಿವರು ಮಾತುಕತೆ ನಡೆಸಿದ ಬಳಿಕ ಅಂತಿಮ ತೀರ್ಮಾನ ಪ್ರಕಟವಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next