Advertisement

ಸಶಸ್ತ್ರ ಪಡೆ ಯೋಧರಿಗೆ ಖಾದಿ ಸಮವಸ್ತ್ರ

09:55 AM Aug 05, 2017 | Karthik A |

ಹೊಸದಿಲ್ಲಿ: ಸಶಸ್ತ್ರಪಡೆ ಯೋಧರು ಶೀಘ್ರದಲ್ಲೇ ಖಾದಿ ಸಮವಸ್ತ್ರ ಧರಿಸಲಿದ್ದಾರೆ. ಈ ನಿಟ್ಟಿನಲ್ಲಿ ಈಗಾಗಲೇ ಪ್ರಕ್ರಿಯೆ ಆರಂಭಿಸಿರುವ ರಕ್ಷಣಾ ಸಚಿವಾಲಯ, ಸಮವಸ್ತ್ರದ ನಿರ್ದಿಷ್ಟ ಚಿತ್ರಣವನ್ನು ಮಾದರಿಯೊಂದಿಗೆ ಖಾದಿ ಗ್ರಾಮೋದ್ಯೋಗ ಆಯೋಗ (ಕೆವಿಐಸಿ)ಕ್ಕೆ ಕಳುಹಿಸಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಭದ್ರತಾ ಸಿಬ್ಬಂದಿಗೆ ಖಾದಿ ಸಮವಸ್ತ್ರವನ್ನು ಒದಗಿಸುವ ಬಗ್ಗೆ ಪರಿಗಣಿಸಬೇಕು ಎಂದು ಕೆವಿಐಸಿ ಮನವಿ ಮಾಡಿತ್ತು. ಅದರಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಕ್ಷಣಾ ಖಾತೆ ಸಹಾಯಕ ಸಚಿವ ಸುಭಾಷ್‌ ಭಾಮ್ರೆ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next