Advertisement
ಟೋಕಿಯೊ ಒಲಿಂಪಿಕ್ಸ್ ಟಿಕೆಟ್ ಗಿಟ್ಟಿಸಿರುವ ಸಿಮ್ರನ್‌ಜಿತ್ (ಮಹಿಳೆಯರ 60 ಕೆ.ಜಿ ವಿಭಾಗ), 2018ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು, ಪುರುಷರ 57 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸುವ ಗೌರವ್, 2018ರ ಕಾಮನ್ವೆಲ್ತ್ ಕೂಟದಲ್ಲಿ ಚಿನ್ನದ ಪದಕ, 2018ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸೋನಿಯಾ ಚಾಹಲ್ (ಮಹಿಳೆಯರ 57 ಕೆ.ಜಿ ವಿಭಾಗ) ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದರು. ಈ ಸಾಧನೆಯನ್ನು ಆಧರಿಸಿ ಮೂವರ ಹೆಸರುಗಳನ್ನು ಪ್ರಶಸ್ತಿಗೆ ಅಂತಿಮಗೊಳಿಸಲಾಗಿದೆ ಎಂದು ಬಿಎಫ್ಐ ಪ್ರಧಾನ ಕಾರ್ಯದರ್ಶಿ ಹೇಮಂತ್ ಕಲಿಟಾ ಹೇಳಿದ್ದಾರೆ.
ಭಾರತದ ಭರವಸೆಯ ಟೆನಿಸ್ ಆಟಗರರಾದ ಅಂಕಿತಾ ರೈನಾ ಮತ್ತು ಪ್ರಜ್ನೆàಶ್ ಗುಣೇಶ್ವರನ್ ಅವರ ಹೆಸರನ್ನು ಅಖೀಲ ಭಾರತ ಟೆನಿಸ್ ಅಸೋಸಿಯೇಶನ್ ಅರ್ಜುನ ಪುರಸ್ಕಾರಕ್ಕೆ ಶಿಫಾರಸು ಮಾಡಿದೆ. ಉಳಿದಂತೆ ಬಲರಾಮ್ ಸಿಂಗ್ ಮತ್ತು ಎನ್ರಿಕೊ ಪಿಪೊನೊì ಅವರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಸೂಚಿಸಲಾಗಿದೆ.
Related Articles
ಪ್ರತಿಷ್ಠಿತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗಾಗಿ “ಒಡಿಶಾ ಸರಕಾರ’ ಭಾರತದ ಸ್ಟಾರ್ ಓಟಗಾರ್ತಿ ದ್ಯುತಿ ಚಂದ್ ಹೆಸರನ್ನು ಶಿಫಾರಸು ಮಾಡಿದೆ.
Advertisement
“ನನ್ನ ಸಾಧನೆಯನ್ನು ಪರಿಗಣಿಸಿ ಖೇಲ್ ರತ್ನಕ್ಕೆ ನಾಮನಿರ್ದೆಶನ ಮಾಡಿದ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಸರ್‌ಗೆ ಧನ್ಯವಾದ’ ಎಂದು ದ್ಯುತಿ ಚಂದ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.