Advertisement

ಮುಂಬೈನ ಅ-19 ತಂಡಕ್ಕೆ ಸಚಿನ್‌ ಪುತ್ರ ಅರ್ಜುನ್‌ ಆಯ್ಕೆ

07:15 AM Sep 11, 2017 | Team Udayavani |

ಮುಂಬಯಿ: ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಪುತ್ರ ಅರ್ಜುನ್‌ ತೆಂಡುಲ್ಕರ್‌ ಮುಂಬಯಿಯ 19 ವರ್ಷದೊಳಗಿನ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇದಕ್ಕೂ ಮುನ್ನ ಅರ್ಜುನ್‌ ಮುಂಬಯಿಯ ಅಂಡರ್‌ 14 ಮತ್ತು ಅಂಡರ್‌16 ತಂಡದಲ್ಲಿ ಆಡಿದ ಅನುಭವ ಹೊಂದಿದ್ದರು.

Advertisement

ಸೆ.16ರಿಂದ ಸೆ.23ರವರೆಗೆ ಜೆವೈ ಲೆಲೆ ಅಖೀಲ ಭಾರತ ಅಂಡರ್‌ 19 ಏಕದಿನ ಸರಣಿ ಆರಂಭವಾಗಲಿದೆ. ಮುಂಬಯಿ ತಂಡ ಮೊದಲ ಪಂದ್ಯವನ್ನು ಬರೋಡ ವಿರುದ್ಧ ಆಡಲಿದೆ. ಎಡಗೈ ವೇಗದ ಬೌಲರ್‌ ಆಗಿರುವ ಅರ್ಜುನ್‌ ಇತ್ತೀಚೆಗೆ ಇಂಗ್ಲೆಂಡ್‌ನ‌ ಲಾರ್ಡ್ಸ್‌ ಮೈದಾನದಲ್ಲಿ ಅಭ್ಯಾಸ ನಡೆಸಿದ್ದರು. ಮಹಿಳಾ ಏಕದಿನ ವಿಶ್ವಕಪ್‌ ಸಂದರ್ಭದಲ್ಲಿ ಭಾರತದ ಆಟಗಾರ್ತಿಯರು ನೆಟ್ಸ್‌ ಅಭ್ಯಾಸ ನಡೆಸುವಾಗ ಅರ್ಜುನ್‌ ಬೌಲಿಂಗ್‌ ನಡೆಸಿ ಗಮನ ಸೆಳೆದಿದ್ದರು. ಅದು ಮಾತ್ರವಲ್ಲ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ ಜಾನಿ ಬೇರ್‌ಸ್ಟೋಗೆ ಅರ್ಜುನ್‌ ಯಾರ್ಕರ್‌ನಿಂದ ಗಾಯವಾಗಿ ದೊಡ್ಡ ಸುದ್ದಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next